ಸುವಿಚಾರ ಬಳಗ – ಅಡಿಗ ಕವಿತಾ ಗಾಯನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕವನಗಳನ್ನು ಹಾಡುವಾಗ ಸಾಹಿತ್ಯಕ್ಕೆ ಮುತ್ತು ಕೊಟ್ಟು, ಪದ-ಪದ ಪ್ರಸ್ತಾರ ಹಾಕಿ ಪ್ರಸ್ತುತ ಪಡಿಸಿದರೇ ಕವಿಯ ಆಶಯ ಪೂರ್ತವಾಗುವುದು. ಕವಿ ಅಡಿಗರ ಆಯ್ದ ಹಾಡುಗವನಗಳನ್ನು ಸಂಗ್ರಹಿಸಿ ಕವಿಯ ಆಶಯ ಮತ್ತು ಕವನದ ಒಟ್ಟು ಅರ್ಥ ಸ್ಫುರಿಸಲು ಅನುವಾಗುವಂತೆ ಸುವಿಚಾರ ಬಳಗದ ಯು. ವರಮಹಾಲಕ್ಷ್ಮೀ ಹೊಳ್ಳ ಮತ್ತು ತಂಡ ಹಾಕಿದ ಮೇಲ್ಪಂಕ್ತಿ ಕವಿ ಅಡಿಗರ ಜನ್ಮ ಶತಾಬ್ಧಿಯ ಉತ್ತಮ ಕಾಣೆಯಾಗಿದೆ. ಇದು ಐತಿಹಾಸಿಕವಾಗಿದ್ದು ಇದರ ಮಹತ್ವ ದರ್ಶಕದ ಬಳಿಕ ಅರಿವಿಗೆ ಬರಬಹುದು. ಎಂದು ಸಿರಿಮೋಗೇರಿ ಸಮಷ್ಠಿ ವೇದಿಕೆಯ ಸಂಚಾಲಕ ಎಂ .ಜಯರಾಮ್ ಅಡಿಗರು ನುಡಿದರು.

Call us

Click Here

ಉಪ್ಪುಂದದ ಸುವಿಚಾರ ಬಳಗವು ಕವಿ ಅಡಿಗರ ಜನ್ಮ ಶತಾಬ್ಧಿ ಕಾರ್ಯಕ್ರಮದಡಿ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಏರ್ಪಡಿಸಿದ ತಿಂಗಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಿದ್ದರು.

ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಮಾತನಾಡಿ ದೀಪದ ಬುಡದಲ್ಲಿ ಕತ್ತಲು, ಹಿತ್ತಲ ಗಿಡ ಮದ್ದಲ್ಲ ಗಾದೆಗಳು ಸುಳ್ಳಾಗುವಂತೆ ನಮ್ಮವರನ್ನು ಆಸ್ವಾದಿಸಿ, ಆನಂದಿಸಿ, ಗೌವರಸುವುದು. ನಮ್ಮ ನಮ್ಮ ವ್ಯಕ್ತಿತ್ವದ ಧನಾತ್ಮಕ ಅಂಶ ಎಂಬುವುದನ್ನು ಅರಿಯಬೇಕು ಎಂದರು.

ಯು ವರಮಹಾಲಕ್ಷ್ಮೀ ಹೊಳ್ಳರು ಕವಿ ಅಡಿಗರ ಹಲವು ಕವನಗಳಗೆ ರಾಗ ಸಂಯೋಜಿಸಿ, ಕವನದ ಭಾವಾರ್ಥ ಮತ್ತು ಸೂಕ್ಷತೆಗಳನ್ನು ವಿವರಿಸಿ ತಂಡದ ವಿದ್ಯಾ, ವೀಣಾ ಮತ್ತು ವಾಣೆ ಯವರ ಸಹಕಾರದಿಂದ ಕವಿ ಅಡಿಗರಿಗೆ ಶತಾಬ್ಧಿ ವರ್ಷದಲ್ಲಿ ತಮ್ಮ ಗೌರವ ಸಲ್ಲಿಸಿದರು. ಮಾತೃ ಮಂಡಳಿಯ ಸದಸ್ಯರು ಪ್ರಾರ್ಥಿಸಿದರು. ಸುವಿಚಾರ ವೇದಿಕೆಯ ಸಂಚಾಲಕ ಕೇಶವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವಿ.ಹೆಚ್. ನಾಯಕ್ ವಂದಿಸಿದರು.

Leave a Reply