ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿ ಗಾಂಧಿಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಪುಷ್ಪನಮನ ಸಲ್ಲಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಎಮ್. ಜಿ ಬಾನಾವಳಿಕರ್ ಪುಷ್ಪ ನಮನ ಸಲ್ಲಿಸಿ ಗಾಂಧಿಜಿ ಹಾಗೂ ಶಾಸ್ತ್ರಿಯವರ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶಂಕರ ಪೂಜಾರಿ ಹಾಗೂ ಮೇಲ್ವಿಚಾರಕರಾದ ಎ.ಬಿ.ಪೂಜಾರಿ ಉಪಸ್ಥಿತರಿದ್ದು, ಪುಷ್ಪ ನಮನ ಸಲ್ಲಿಸಿದರು. ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸರ್ವಧರ್ಮ ಭಜನೆಯನ್ನು ಮಾಡಿದರು.