ನಿವೇಶನ ರಹಿತರಿಗೆ ಹಕ್ಕು ಪತ್ರ ಆಗ್ರಹಿಸಿ ಯಡ್ತರೆ ಗ್ರಾಮ ಪಂಚಾಯತ್ ಮುತ್ತಿಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಯಡ್ತರೆ ಗ್ರಾಮದ ಬಡನಿವೇಶನ ರಹಿತರಿಂದ ನಿವೇಶನ ಹಕ್ಕು ಪತ್ರ ಕೋರಿಕೆಗೆ ಒತ್ತಾಯಿಸಿ ಸ್ವೀಕರಿಸಿದ ೨೬೪ ಅರ್ಜಿಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಕಛೇರಿಗೆ ಸಾಮೂಹಿಕವಾಗಿ ಹಸ್ತಾಂತರಿಸುವ ಹೋರಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಸಮಾವೇಶವನ್ನು ಉದ್ಘಾಟಿಸಿದ ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಗಣೇಶ ತೊಂಡೆಮಕ್ಕಿ ಮಾತನಾಡುತ್ತಾ ಯಡ್ತರೆ ಗ್ರಾಮದ ಬಡ ನಿವೇಶನ ರಹಿತರ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿ ನಿವೇಶನ ರಹಿತರ ಪಟ್ಟಿಯನ್ನು ಸಿದ್ಧಪಡಿಸಬೇಕು ಹಾಗೂ ನಿವೇಶನ ರಹಿತರಿಗಾಗಿ ಒಟ್ಟು ಎಷ್ಟು ಸರಕಾರಿ ಜಮೀನು ಅಗತ್ಯವಿದೆ ಎಂಬುದಕ್ಕೆ ಕಂದಾಯ ಇಲಾಖೆಗೆ ಪ್ರಸ್ಥಾವನೆ ಕಳುಹಿಸಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿಯವರಲ್ಲಿ ಒತ್ತಾಯಿಸಿದರು.

Call us

Click Here

ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಮುಖಂಡರಾದ ಸುರೇಶ್ ಕಲ್ಲಾಗರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಯಡ್ತರೆ ಗ್ರಾಮದ ಬಡ ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ಸಿಐಟಿಯು ಕಾರ್ಮಿಕ ಸಂಘಗಳ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು. ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ತಾಲೂಕು ಕಾರ್ಯದರ್ಶಿ ನಾಗರತ್ನ ನಾಡ, ಗಣೇಶ ಮೊಗವೀರ ಬೈಂದೂರು, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ, ರೋನಿ ನಜರತ್ ಪಡುವರಿ, ಮುತ್ತ ಮಾರ್ಕೊಡ, ಗೋವಿಂದ ಪೂಜಾರಿ ತಗ್ಗರ್ಸೆ, ಜಯಲಕ್ಷ್ಮೀ, ಥೋಮಸ್ ಡಯಾಸ್ ಉಪಸ್ಥಿತರಿದ್ದರು.

Leave a Reply