ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನೂತನ ಶಿಲಾದೇಗುವ ರಚನೆಯ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಡುಕೋಣೆ ನರಸಿಂಹ ಪೂಜಾರಿ, ಉಪಾಧ್ಯಕ್ಷರಾಗಿ ಸತೀಶ ಕೊಠಾರಿ ಮುಂಬೈ, ಡಾ. ಬಾಲಚಂದ್ರ ಭಟ್, ಬಿ. ಕುಮಾರ ಖಾರ್ವಿ, ಪ್ರವೀಣಕುಮಾರ್, ದೇವರಾಜ ಬೈಂದೂರು, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪುಂಡಲೀಕ ನಾಯಕ್, ಸಹಕಾರ್ಯದರ್ಶಿಯಾಗಿ ಶ್ರೀನಿವಾಸ ಉಬ್ಜೇರಿ, ಕೋಶಾಧಿಕಾರಿಯಾಗಿ ರಮೇಶ ಪೈ ಎನ್. ಗೌರವ ಸಲಹೆಗಾರರಾಗಿ ಗೋವಿಂದ ಎಂ. ಮಟ್ನಕಟ್ಟೆ, ರಾಜೀವ ಭಟ್ ನಂದನವನ ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಬಿ. ಎಸ್. ಶ್ಯಾನುಭೋಗ, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಂದರ ಕೊಠಾರಿ, ಸಮಿತಿಯ ಸದಸ್ಯರು, ಅರ್ಚಕ ರಾಘವೇಂದ್ರ ಮಧ್ಯಸ್ಥ ಉಪಸ್ಥಿತರಿದ್ದರು.