ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅರಸಿನ-ಕುಂಕುಮ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯೂ ಕೂಡಾ ಸರಿಸಮಾನವಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಕಾಣಬಹುದಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕಿ ಶಾರದಾ ಹೇಳಿದರು.

Call us

Click Here

ಬೈಂದೂರು ರೋಟರಿ ಸಭಾಭವನದಲ್ಲಿ ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಅರಸಿನ-ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯರಿಂದ ಬಂದಿರುವ ಸಂಪ್ರದಾಯವೂ ಕೂಡಾ ವಿಜ್ಞಾನವೇ ಆಗಿದೆ. ಧಾರ್ಮಿಕ ಸಂಕೇತಗಳು ಒಂದು ಧರ್ಮವನ್ನು ಉಳಿಸಿ, ಬೆಳೆಸುವಲ್ಲಿ ತಮ್ಮದೇ ಆದ ಪಾತ್ರವಹಿಸುತ್ತದೆ. ಅರಶಿನ, ಕುಂಕುಮ, ಕರೀಮಣಿ, ಮೂಗಿನ ನತ್ತು ಹಾಗೂ ಕಾಲುಂಗುರ ಇವುಗಳು ಗೃಹಿಣಿಯರ ಸೌಂದರ್ಯವರ್ಧಕ ಜತೆಗೆ ಮುತ್ತೈದೆ ಸಂಕೇತವಾಗಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಭಾರತೀಯ ನಾರಿ ನಡೆದು ಬಂದ ದಾರಿ ಕಳೆದು ಹೋಗುತ್ತಿದೆ. ನಮ್ಮ ಧಾರ್ಮಿಕ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ನಮ್ಮಲ್ಲಿನ ಕೆಲವರು ಧರಿಸುವ ಬಟ್ಟೆಗಳ ವಿನ್ಯಾಸಗಳು, ಆಹಾರ ಪದ್ದತಿಯೂ ಬದಲಾಗುತ್ತಿದೆ. ಆಧುನಿಕ ಭರಾಟೆಯಲ್ಲಿ ಅರಶಿನ, ಕುಂಕುಮ ಮಾಯವಾಗಿ ಆ ಸ್ಥಳವನ್ನು ಸ್ಟಿಕ್ಕರ್‌ಗಳು ಆವರಿಸಿಕೊಂಡಿದೆ. ಪಾಶ್ಚಾತ್ಯ ಸಂಸ್ಕೃತಿಗೆ ನಮ್ಮ ಮಕ್ಕಳು ಒಗ್ಗದೆ ನಮ್ಮ ಹಿಂದಿನ ತಪಸ್ವಿಗಳು, ಜ್ಞಾನಿಗಳು ಕೊಡುಗೆಯಾಗಿ ನೀಡಿದ ಶ್ರೇಷ್ಠ ಭಾರತೀಯ ಸಂಸ್ಕೃತಿಯಂತೆ ವಿವಿಧ ಆಚರಣೆಗಳನ್ನು ಮಾಡಿದರೆ ನಮ್ಮ ಹಬ್ಬ ಹರಿದಿನಗಳಿಗೆ, ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತದೆ. ಧಾವಂತದಲ್ಲಿಯೂ ಕೂಡಾ ಮಹಿಳೆಯರು ತಮ್ಮತನವನ್ನು ಬಿಡಬಾರದು ಎಂದರು.

ಬೈಂದೂರು ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಗೌರಿ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾರ್ಯಕ್ರಮದ ಪ್ರಾಯೋಜಕರಾದ ಕಲಾವತಿ ನಾಗರಾಜ್ ಗಾಣಿಗ ದಂಪತಿಗಳನ್ನು ಗೌರವಿಸಲಾಯಿತು. ತಾಪಂ ಸದಸ್ಯರಾದ ಗ್ರೀಷ್ಮಾ ಭಿಡೆ, ಪ್ರಮೀಳಾ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್, ಕಾರ್ಯದರ್ಶಿ ಬಿ. ಎಂ. ನಾಗರಾಜ ಗಾಣಿಗ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಾಂತಿ ಪಿರೇರಾ, ವಂಡ್ಸೆ ಬ್ಲಾಕ್ ಅಧ್ಯಕ್ಷೆ ಲಲಿತಾ ಗಾಣಿಗ ಉಪಸ್ಥಿತರಿದ್ದರು. ಪಾರ್ವತಿ ಪ್ರಾರ್ಥಿಸಿದರು. ಸೂರ್ಯಕಾಂತಿ ಸ್ವಾಗತಿಸಿ, ಅಂಬಿಕಾ ಮಯ್ಯ ನಿರೂಪಿಸಿ, ವಂದಿಸಿದರು.

Leave a Reply