ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ `ಆ್ಯಟ್ರೀಬ್ಯುಟ್ಸ್ ಆಫ್ ಆ್ಯಂಕರ್” ಎಂಬ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಪಿ.ಜಿ ಸೆಮಿನಾರ್ ಹಾಲ್‍ನಲ್ಲಿ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿನಿ, ಪ್ರಸ್ತುತ ನ್ಯೂಸ್ 18 ಕನ್ನಡ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿರುವ ಶಮೀರಾ ಬೆಳವಾಯಿ ಭಾಗವಹಿಸಿದರು. ವಿದ್ಯೂನ್ಮಾನ ಮಾದ್ಯಮಗಳಲ್ಲಿ ನಿರೂಪಕರಾಗಲೂ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಬೆಳಕು ಚೆಲ್ಲಿದರು. ನಿರೂಪಕರಾಗಲೂ ಅಂದ-ಚಂದ ಎಂದೂ ಪ್ರಮುಖ ಮಾನದಂಡವಲ್ಲ. ವಿಷಯ ಜ್ಞಾನ, ಪ್ರಸ್ತುತ ವಿದ್ಯಮಾನಗಳ ತಿಳುವಳಿಕೆ, ನಿರಂತರ ಓದು ಪಾತ್ರವಹಿಸುವ ಪ್ರಮುಖ ಕೌಶಲಗಳು ಎಂದರು. ನಿರೂಪಕರಾಗಲೂ ಬೇಕಾದ `ಸಿ’ ಸೂತ್ರವನ್ನು ತಿಳಿಸಿದ ಅವರು, ಕಾನ್ಫಿಡೆನ್ಸ್, ಕ್ಲಾರಿಟಿ, ಕಾನ್ಸಟ್ರೇಶನ್, ಕ್ಯೂರಿಯಾಸಿಟಿ, ಕಾಮನ್‍ಸೆನ್ಸ್ ಗುಣಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
ನಿರೂಪಣೆಯ ಜೊತೆಯಲ್ಲಿ ಹಿನ್ನಲೆಧ್ವನಿಗೆ ಸಂಬಂದಿಸಿದಂತೆ ವಿವಿಧ ಪ್ರಕಾರಗಳ ಸ್ಟೋರಿಗಳಿಗೆ ಬೇಕಾಗುವ ಧ್ವನಿಏರಿಳಿತದ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು. ಹಾರ್ಡ್ ನ್ಯೂಸ್, ಸೋಪ್ಟ್ ನ್ಯೂಸ್, ಕ್ರೈಂ, ಸ್ಪೋಟ್ಸ್, ಸ್ಪಶೆಲ್ ಸ್ಟೋರಿಗಳ ಧ್ವನಿ ಏರಿಳಿತದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಜೀವನ್‍ರಾಂ, ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಬಂಟ್ವಾಳ್, ಉಪನ್ಯಾಸಕರಾದ ಡಾ ಶ್ರೀನಿವಾಸ ಹೊಡೆಯಲ, ದೇವಿಶ್ರೀ ಮಂಜುನಾಥ ಪ್ರಸಾದ್ ಶೆಟ್ಟಿ, ಸ್ವಾತಿ ಶೆಟ್ಟಿ, ಕೃಷ್ಣಪ್ರಶಾಂತ, ಪ್ರಸಾದ ಶೆಟ್ಟಿ, ಹಳೆವಿದ್ಯಾರ್ಥಿನಿ, ಫ್ರೀಲ್ಯಾನ್ಸರ್ ಪದ್ಮಿನಿ ಜೈನ್ ಉಪಸ್ಥಿತರಿದ್ದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಚೈತಾಲಿ ರೈ ಕಾರ್ಯಕ್ರಮ ನಿರೂಪಿಸಿದರು.