ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಜೂರು ವಜ್ರದುಂಬಿ ಗೆಳೆಯರ ಬಳಗದ ನೇತೃತ್ವದಲ್ಲಿ ಹೆಗ್ಡೆ ಮತ್ತು ಹೆಗ್ಡೆ ಮೆಡಿಕಲ್ ಕಂಪನಿಯ ಸಹಭಾಗಿತ್ವದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಚರ್ಮರೋಗ ತಜ್ಞರ ತಂಡದವರಿಂದ ಮೂರನೇ ವರ್ಷದ ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು.
ಖ್ಯಾತ ಚರ್ಮರೋಗ ತಜ್ಞ ಡಾ. ಸತೀಶ್ ಪೈ ಶಿಬಿರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ನುಡಿನಮನ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿತ್ತು. ಜಿಪಂ ಸದಸ್ಯೆ ಗೌರಿ ದೇವಾಡಿಗ, ಡಾ. ಸುಧೀರ್ ನಾಯಕ್, ಡಾ. ಅನುರಾಧಾ ಜಿಂದಾಲ್, ಮೆಡಿಕಲ್ ಕಂಪೆನಿಯ ರಿಜನಲ್ ಮ್ಯಾನೇಜರ್ ದಿನೇಶ್ ಕುಮಾರ್, ಉದ್ಯಮಿ ಬಿ. ಜಿ. ಲಕ್ಷ್ಮೀಕಾಂತ್ ಬೆಸ್ಕೂರ್, ಬಳಗದ ಗೌರವ ಸಲಹೆಗಾರ ಸುಬ್ರಹ್ಮಣ್ಯ ಜಿ. ಉಪ್ಪುಂದ, ಉಪಾಧ್ಯಕ್ಷ ಮಂಜುನಾಥ ಜಡ್ಡಿನಮನೆ, ಸಂತೋಷ್ ಒಡೆಯರ್, ಸುರೇಂದ್ರ ಖಾರ್ವಿ, ರಾಘವೇಂದ್ರ ಬಿಜೂರು, ಸತೀಶ್, ಸುರೇಶ್ ಬೆಸ್ಕೂರ್ ಇದ್ದರು. ಕಾರ್ಯದರ್ಶಿ ಸುಧಾಕರ ನಾರಂಬಳ್ಳಿ ವಂದಿಸಿದರು. ಸುಮರು ೭೦೦ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.