ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಇತ್ತೀಚಿಗೆ ಮೃತಪಟ್ಟ ಕಂಚುಗೋಡು ನಿವಾಸಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಸದಸ್ಯ ಬಾಬು ಖಾರ್ವಿ ಕುಟುಂಬಕ್ಕೆ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಸಹಾಯಧನವನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ೨೫ ಸಾವಿರ ರೂ.ಗಳ ಸಹಾಯ ಧನದ ಚೆಕ್‌ನ್ನು ಮೃತರ ಪತ್ನಿ ಶಾಂತಿ ಖಾರ್ವಿ ಅವರಿಗೆ ಹಸ್ತಾಂತರಿಸಿದರು. ಸಂಘದ ಉಪಾಧ್ಯಕ್ಷ ಗುರುನಾಥ ಪಟೇಲ್, ಕಾರ್ಯದರ್ಶಿ ದೇವದಾಸ ಖಾರ್ವಿ, ಮಾಜಿ ಕಾರ್ಯದರ್ಶಿ ಚೌಕಿ ವಿಠಲ ಖಾರ್ವಿ, ನಾಗಪ್ಪಯ್ಯ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.