ಹೊರನಾಡ ಕನ್ನಡಿಗ ದೀಪಕ್ ಶೆಟ್ಟಿ ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಹೊರನಾಡ ಕನ್ನಡಿಗ, ಕುಂದಾಪುರ ತಾಲೂಕಿನ ಗೊಳಿಹೊಳೆ ಗ್ರಾಮ ಚುಚ್ಚಿಯ ದೀಪಕ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಪ್ರಸ್ತತ ಕತಾರ್‌ನಲ್ಲಿ ವಾಸಿಸುತ್ತಿರುವ ದೀಪಕ್ ಶೆಟ್ಟಿ ಅವರ ಸಾಮಾಜಿಕ ರಂಗದ ಸೇವೆ ಹಾಗೂ ವಿದೇಶದಲ್ಲಿನ ಕನ್ನಡ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Call us

Click Here

ಕರ್ನಾಟಕ ಸಂಘ ಕತಾರ್‌ನ ಸಲಹಾ ಸಮಿತಿ ಅಧ್ಯಕ್ಷರಾಗಿರುವ ದೀಪಕ್ ಶೆಟ್ಟಿ, ೨೦೧೩-೧೫ರ ಸಾಲಿನಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅದಕ್ಕೂ ಹಿಂದಿನ ಅವಧಿಯಲ್ಲಿ ಸಂಘದ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ದಶಕಗಳಿಂದ ಕತಾರಿನಲ್ಲಿ ನೆಲೆಸಿರುವ ಇವರು ಉದ್ಯೋಗದೊಂದಿಗೆ ತುಳುಕೂಟ, ಬಂಟರ ಸಂಘ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಇಂಡಿಯನ್ ಕಮ್ಯುನಿಟಿ ಬೆನವೊಲಂಟ್ ಪೋರಮ್ ಮುಂತಾದ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ.

ಬಡ ಮಕ್ಕಳ ಹೃದಯ ಚಿಕಿತ್ಸೆಗೆ ಸಹಕಾರ, ಶಾಲೆ, ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಸಹಾಯ ಧನ ಹೀಗೆ ಹಲವು ತೆರನಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ೨೦೧೫ರಲ್ಲಿ ಕತಾರ್ ಪರಿಸರ ಸಚಿವಾಲಯ ಆಯೋಜಿಸಿದ ಸ್ಪರ್ದೆಯಲ್ಲಿ ಕರ್ನಾಟಕ ಸಂಘವು ಇವರ ಮುಂದಾಳತ್ವದಲ್ಲಿ ಪ್ರತಿಷ್ಟಿತ ಮಿನಿಸ್ಟರ್ಸ್ ರೋಲಿಂಗ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಕುಂದಾಪ್ರ ಡಾಟ್ ಕಾಂ.

ಕತಾರ್‌ನ ಭಾರತೀಯ ರಾಯಭಾರಿ ಕೇಂದ್ರ ಹಾಗೂ ವಿವಿಧ ಸಂಘಟನೆಗಳು ಇವರ ಪರಿಸರ ಕಾಳಜಿ ಹಾಗೂ ಸಾಮಾಜಿಕ, ಮಾನವೀಯ ಕಾರ್ಯವನ್ನು ಗುರುತಿಸಿ ಸನ್ಮಾನಿಸಿವೆ. ಮೇ.೧೮ರಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ೨೦೧೫ನೇ ಸಾಲಿನ ಆರ್ಯಭಟ ಪ್ರಶಸ್ತಿಯುವೂ ಇವರ ಮುಡಿಗೇರಲಿದೆ. ಮೂಲತಃ ಕುಂದಾಪುರ ತಾಲೂಕಿನ ಗೋಳಿಹೊಳೆ ಗ್ರಾಮದ ಚುಚ್ಚಿಯವರಾದ ದೀಪಕ್ ಶೆಟ್ಟಿ ಅವರು ವಿಜಯ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ಹಾಗೂ ಕುಂದಾಪುರ ಲಯಸ್ಸ್ ಕ್ಲಬ್ ಅಧ್ಯಕ್ಷರಾಗಿದ್ದ ದಿ. ಸಚ್ಚಿದಾನಂದ ಶೆಟ್ಟಿ ಅವರು ಹಿರಿಯ ಪುತ್ರರಾಗಿದ್ದಾರೆ.

Leave a Reply