ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ‘ಸೌಡ ಮಧುರ ಯುವಕ ಮಂಡಲ’ಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ೨೫ ವರ್ಷಗಳ ಹಿಂದೆ ೧೯೯೨ರಂದು ಸಾಮಾಜಿಕ ಚಿಂತನೆಗಳ ಕನಸನ್ನು ಹೊತ್ತು ಯುವ ಮನಸ್ಸುಗಳಿಂದ ರೂಪುಗೊಂಡು ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮಧುರ ಯುವಕ ಮಂಡಲ ಸೌಡ(ರಿ) ಸಂಸ್ಥೆಯು ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.

Call us

Click Here

ಸಾಮಾಜಿಕ ಕೈಂಕರ್ಯದ ತಳಹದಿಯ ಮೇಲೆ ರೂಪುಗೊಂಡ ಮಧುರ ಯುವಕ ಮಂಡಲ ಅನೇಕ ಸಾಮಾಜಿಕ ಜವಾಬ್ಧಾರಿಗಳನ್ನು ನಿರ್ವಹಿಸಿ ಜನರ ಗಮನ ಸೆಳೆದಿದೆ. ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುರುತಿಸಿ ಗೌರವಿಸಿ ಯುವ ಮನಸ್ಸುಗಳಿಗೆ ಹುರುಪನ್ನು ತುಂಬುವ ಕಾರ್ಯವನ್ನು ಮಾಡುತ್ತಾ ಬಂದಿದೆ.

ಈ ಭಾಗದ ಧಾರ್ಮಿಕ ಕಾರ್ಯಕ್ರಮಗಳು, ಪರಿಸರ ಕಾಳಜಿಯ ಕಾರ್ಯಕ್ರಮಗಳು, ಸಾಮಾಜಿಕ ಹೊಣೆಗಾರಿಕೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಸ್ಥೆಯು ಮೂಲಕ ಯುವಕರು ತೊಡಗಿಕೊಂಡಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಅಧ್ಯಕ್ಷರಾಗಿ ಉದಯ ಐತಾಳ್, ಉಪಾಧ್ಯಕ್ಷರಾಗಿ ಉದಯ ದೇವಾಡಿಗ, ಕಾರ್ಯದರ್ಶಿಯಾಗಿ ರಂಜಿತ ಮೊಗವೀರ ಸೇರಿದಂತೆ ಯವಕರ ಪಡೆ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದೆ.

 

Leave a Reply