ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟಿ.ವಿ, ಮೊಬೈಲ್ ಮುಂತಾದ ಆಧುನಿಕ ಸಾಧನಗಳಿಂದಾಗಿ ಮಕ್ಕಳು ಆಟಕ್ಕೆ ಕುತ್ತು ಬಂದಿದೆ. ಆಟ ಆಡುವವರೇ ಇಲ್ಲದಂತಾಗಿದೆ. ಬಹಳಷ್ಟು ಮಕ್ಕಳಲ್ಲಿ ಏಕಾಗ್ರೆತೆ ಕೊರತೆ, ನಿರಾಸಕ್ತಿ ಕಂಡು ಬರುತ್ತಿದೆ ಎಂದು ಖ್ಯಾತ ಮನೋಶಾಸ್ತ್ರಜ್ಞ ಡಾ. ಪಿ. ವಿ ಭಂಡಾರಿ ಆಂತಕ ವ್ಯಕ್ತಪಡಿಸಿದರು.
ಅವರು ಕುಂದಾಪುರದ ಕಲಾಮಂದಿರದಲ್ಲಿ ನಡೆದ ಕಾರ್ಟೂನು ಹಬ್ಬ ಮೊದಲ ದಿನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗಾಗಿ ಆಯೋಜಿಸಲಾಗಿದ್ದ ಕಾರ್ಟೂನು ಸ್ವರ್ಧೆ ಹಾಗೂ ಮಾಯಾ ಕಾಮತ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಟೂನು ಸ್ವರ್ಧೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವ್ಯಂಗ್ಯಚಿತ್ರಕಾರ ರವಿರಾಜ್ ಹಾಲಂಬಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ರಶ್ಮಿ ಕುಂದಾಪುರ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ವಿಜಯ ಕರ್ನಾಟಕ ಪತ್ರಿಕೆಯ ಕಿರಿಯ ಸಹ ಸಂಪಾದಕಿ ಮೇರಿ ಜೋಸೆಫ್, ಹಟ್ಟಿಯಂಗಡಿ ಸಿದ್ದಿವಿನಾಯಕ ರೆಸಿಡೆನ್ಸಿಯಲ್ ಶಾಲೆಯ ಪ್ರಾಂಶುಪಾಲರಾದ ಶರಣ್‌ಕುಮಾರ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಚೈತ್ರಾ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ನೂರಕ್ಕು ಹೆಚ್ಚು ಮಕ್ಕಳು ಕಾರ್ಟೂನು ಸ್ವರ್ಧೆಯಲ್ಲಿ ಭಾಗವಹಿಸಿದ್ದರು.