ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಯಾವುದನ್ನು ಹರಡಬೇಕು ಹಾಗೂ ಯಾವುದನ್ನು ಹರಡಬಾರದು ಎಂಬ ಪರಿವೆ ಇಲ್ಲದ್ದರಿಂದ ಉಂಟಾಗಿರುವ ಗೊಂದಲವನ್ನು ವ್ಯಂಗ್ಯಚಿತ್ರಗಳು ವಿಡಂಭನಾತ್ಮಕವಾಗಿ ಬಿಂಬಿಸಿದ್ದು, ಹಾಸ್ಯದ ಮೂಲಕ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವ ಅಗತ್ಯವೂ ಇದೆ ಎಂದು ಬೆಂಗಳೂರು ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ, ಪತ್ರಕರ್ತ ರಾಘವೇಂದ್ರ ಕಾಂಚನ್ ಹೇಳಿದರು.
ಅವರು ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಕಾರ್ಟೂನು ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಾರ್ಟೂನು ಹಬ್ಬದ ಕೇವಲ ಸಂಭ್ರಮ ವಿನೋದಗಳಿಗೆ ಸೀಮಿತವಾಗಿರದೇ ಉತ್ತಮ ವಿಚಾರ ವಿನಿಮಯ ಹಾಗೂ ಸೃಜನಶೀಲ ಮನಸ್ಸುಗಳ ಸೃಷ್ಠಿಗೆ ಕಾರಣವಾಗಿದೆ. ಕಾರ್ಟೂನು ಬಗೆಗಿನ ಆಸಕ್ತಿರ ಹೊಸ ತಲೆಮಾರಿನ ಸೃಷ್ಠಿಗೂ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಟೋರ್ಪೋಡೋಸ್ ಸ್ಪೋಟ್ಸ್ ಕ್ಲಬ್‌ನ ಗೌತಮ್ ಶೆಟ್ಟಿ, ಚಕ್ರವರ್ತಿ ಕ್ರಿಕೆಟ್ ಕ್ಲಬ್‌ನ್ ಕೋಚ್ ಪ್ರದೀಪ್ ವಾಜ್, ಬಾಲನಟಿ ಶ್ಲಾಘಾ ಸಾಲಿಗ್ರಾಮ ಉಪಸ್ಥಿತರಿದ್ದರು.
ಕಾರ್ಟೂನು ಹಬ್ಬ ಹಾಗೂ ಸೈಂಟ್ ಮೇರಿಸ್ ಶಾಲೆಯ 1985-86 ಬ್ಯಾಚ್‌ನ ಹಳೆವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಚಿತ್ರನಿಧಿಯಿಂದ ಸಂಗ್ರಹವಾದ ರೂ 2,22,222 ದೇಣಿಗೆಯನ್ನು ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಶಾಲೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ವ್ಯಂಗ್ಯಚಿತ್ರಕಾರ ಸುರೇಶ್ ಕೋಟ ಅವರನ್ನು ಸನ್ಮಾನಿಸಲಾಯಿತು.
ವ್ಯಂಗ್ಯಚಿತ್ರಕಾರರಾದ ರವಿಕುಮಾರ್ ಗಂಗೊಳ್ಳಿ ಸನ್ಮಾನಿತರ ಪರಿಚಯ ವಾಚಿಸಿದರು. ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಹಾಗೂ ದಿನೇಶ್ ಸಿ. ಹೊಳ್ಳ ಸಹಕರಿಸಿದರು. ವ್ಯಂಗ್ಯಚಿತ್ರಕಾರದ ಸತೀಶ್ ಆಚಾರ‍್ಯ ಸ್ವಾಗತಿಸಿದರು. ಮಹಾಲಕ್ಷ್ಮೀ ಮಯ್ಯ ಕಾರ್ಯಕ್ರಮ ನಿರೂಪಿಸಿದರು.