ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಆರ್.ಆರ್. ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನೂತನವಾಗಿ ಆರಂಭಗೊಂಡ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘದ ಕಛೇರಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮದನ್ ಕುಮಾರ್, ಉದ್ಯಮಿ ಕಾರ್ತಿಕೇಯ ಮಧ್ಯಸ್ಥ, ಮುಖ್ಯ ಪ್ರವರ್ತಕರಾದ ಬೇಬಿ ಕೊಠಾರಿ, ಸಹಕಾರಿ ಸಂಘದ ಅಧ್ಯಕ್ಷೆ ನಿರ್ಮಲ ಶಂಕರ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವ, ಸಂಸ್ಥೆಯ ನಿರ್ದೇಶಕರಾದ ಶಿಲ್ಪಾ ಕೆ. ಮಧ್ಯಸ್ಥ, ಮಂಜುಳಾ, ಪ್ರಭಾವತಿ, ಸ್ವಪ್ನ, ಸುಜಾತಾ ಖಾರ್ವಿ, ಶಕೀಲಾ, ಪ್ರೇಮಾ, ಕಲ್ಪನಾ ಶೇಖರ ಬಿಲ್ಲವ, ಮೊದಲಾದವರು ಉಪಸ್ಥಿತರಿದ್ದರು.










