ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಘಟಕದ ಅಧ್ಯಕ್ಷರಾಗಿ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವ್ಯದ್ಯಕೀಯ ನಿರ್ದೇಶಕರಾದ ಡಾ. ಸತೀಶ ಪೂಜಾರಿ ಆಯ್ಕೆಯಾಗಿದ್ದಾರೆ.
ಕಳೆದ 18 ವರ್ಷಗಳಿಂದ ಕುಂದಾಪುರದಲ್ಲಿ ಕಿವಿ, ಮೂಗು, ಗಂಟಲು ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ದಕ್ಷಿಣ ಭಾರತದ ಗಾನ ಕೋಗಿಲೆ ಡಾ||ಎಸ್.ಜಾನಕಿ ಹಾಗೂ ದಕ್ಷಿಣ ಭಾರತದ ಮೇರು ಗಾಯಕಿ ವಾಣಿಜಯರಾಂರಂತಹ ಮೇರು ಗಾಯಕಿಯರನ್ನು ಕುಂದಾಪುರಕ್ಕೆ ಕರೆಯಿಸಿ ಅಭಿನಂದಿಸಿ ಸಂಗೀತ ಕಾರ್ಯಕ್ರಮ ಆಂಯೋಜಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವರಲ್ಲದೇ ಆರ್ಯಭಟ ಪ್ರಶಸ್ತಿ ವಿಜೇತ ಗಾಯಕ ರಾಗಿದ್ದಾರೆ.