ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಹೊಸಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ :ಹಚ್ಚ ಹಸುರಿನ ಪ್ರಕ್ರತಿ ಸೊಬಗಿನ ಸೌಂದರ್ಯದ ಸಹ್ಯಾದ್ರಿ ತಪ್ಪಲಿನಲ್ಲಿ ನೆಲೆಯೂರಿದ್ದೂ ಕುಗ್ರಾಮದ ವಿದ್ಯಾಕಾ೦ಕ್ಷಿ ವಿಧ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿರುವ ತಾಲೋಕಿನ ಹೊಸಂಗಡಿ ಪದವಿ ಪೂರ್ವ ಕಾಲೇಜಿಗೆ ಇದೀಗ 25ರ ಹರೆಯ . ಇದೇ ಡಿಸೆಂಬರ್ 2 ರಂದು ಬೆಳ್ಳಿ ಹಬ್ಬದ ಸಂಬ್ರಮವನ್ನು ಆಚರಿಕೊಳ್ಳುತ್ತಿದೆ . 1993ರಲ್ಲಿ ಪ್ರಾರಂಭವಾಗಿದ್ದ ಸಂಸ್ಥೆ ಈ ವರ್ಷ ರಜತ ಮಹೋತ್ವವಕ್ಕೆ ಅಣಿಯಾಗಿದೆ .ಈಗಾಗಲೇ ಹೊಸತನಕ್ಕೆ ಹೊಸಂಗಡಿ ಸದ್ದಿಲ್ಲದೇ ಸಿದ್ದಗೊಂಡಿದ್ದೂ , ಕಾಲೇಜು ಮದುವಣ ಗಿತ್ತಿಯಂತೆ ಕಂಗೊಳಿಸುತ್ತಿದೆ .

Call us

Click Here

ಕಾಲೇಜಿನ ಹಿನ್ನಲೆ :
ಪ್ರೌಡ ಶಿಕ್ಷಣ ಮುಗಿಸಿದ ನಂತರ ವಿಧ್ಯಾರ್ಜನೆಗೆ ವಿದ್ಯಾಕಾಂಕ್ಷಿ ವಿದ್ಯಾರ್ಥಿಗಳು ದೂರದ ಶಂಕರನಾರಾಯಾಣ ,ಬಸ್ರೂರು ,ಅಥವಾ ಕುಂದಾಪುರವನ್ನು ಅವಲಂಬಿಸಬೇಕಿತ್ತು.ವಿದ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಪರಿಸ್ತಿತಿ ಅವಲೋಕಿಸಿದ ಕರ್ನಾಟಕ ವಿದ್ಯುತ್ ನಿಗಮವು ತನ್ನ ಅಧೀನದಲ್ಲಿ 1993ರಲ್ಲಿ ಪದವಿ ಪೂರ್ವ ಕಾಲೇಜುನ್ನು ನಿರ್ಮಿಸಿತು . ಆಗಿನ ಕುಂದಾಪುರದ ಶಾಸಕರಾಗಿದ್ದ ,ಪ್ರತಾಪ ಚಂದ್ರಶೆಟ್ಟಿಯವರು ಲೋಕಾರ್ಪಣೆ ಗೊಳಿಸಿದ್ದರು . ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಆರಂಭವನ್ನು ಕಂಡಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು .2010-11 ರ ಸಾಲಿನಲ್ಲಿ ವಿಜ್ಞಾನ ವಿಭಾಗ ವನ್ನು ಪ್ರಾರಂಭಿಸಿತು.

ಎಡಮೊಗ್ಗೆ ,ಕಮಲಶಿಲೆ,ಹಳ್ಳಿಹೊಳೆ ,ಆಜ್ರಿ,ಸಿದ್ದಾಪುರ,ಮೂಡುಬಗೆ,ಜನ್ಸಾಲೆ,ತೊಂಬಟ್ಟು ಮುಂತಾದ ಕುಗ್ರಾಮದ ಮಧ್ಯಮ ಬಡ ವಿಧ್ಯಾರ್ಥಿಗಳಿಗೆ ವರದಾನವಾಗಿದ್ದ ಕಾಲೇಜಿನಲ್ಲಿ ,ಅದೆಷ್ಟೋ ವಿಧ್ಯಾರ್ಥಿಗಳು ವಿಧ್ಯಾರ್ಜನೆ ಮಾಡಿ ತಮ್ಮ ಭವ್ಯ ಭವಿಷ್ಯದ ಭದ್ರ ಬುನಾದಿಗೆ ಸಾಕ್ಷಿಯಾಗಿದ್ದಾರೆ . ಹೆಸರುವಾಸಿ ಉಪನ್ಯಾಸಕ ವ್ರಂದವಿದ್ದೂ ಉತ್ತಮ ಫಲಿತಾಂಶದೊಂದಿಗೆ ದಿನೇ ದಿನೇ ವಿಧ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ . ಸುಮಾರು 20 ರಿಂದ 35 ಕೀಮಿ ದೂರ ಸಾಗಿ ಪದವಿ ಪೂರ್ವ ಶಿಕ್ಷಣ ಪಡೆಯಬೇಕಿದ್ದ ವಿಧ್ಯಾರ್ಥಿಗಳಿಗೆ ಅನುಕೂಲವಾಗಿರುವುದನ್ನು ತಳ್ಳಿ ಹಾಕುವಂತಿಲ್ಲ . ಇಂತಿಪ್ಪ ಮಲೆನಾಡ ಹೆಬ್ಬಾಗಿಲಿನ ಹೊಸಂಗಡಿ ಪದವಿ ಪೂರ್ವ ಕಾಲೇಜು ಈ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ . ರಜತ ಸಂಭ್ರಮದ ಹೊಸ್ತಿಲಿನಲ್ಲಿನ ಸವಿನೆನಪಿಗಾಗಿ ಮಹನೀಯರ ದಾನಿಗಳ ಹಾಗೂ ಹಳೆವಿಧ್ಯಾರ್ತಿಗಳ ನೆರವಿನೊಂದಿಗೆ ಮೂಲಭೂತ ಯೋಚನಾ ಯೋಜನಾ ಕೈಂಕರ್ಯ ಪೂರ್ಣಗೊಂಡಿದೆ .

ಡಿ .2 ಕ್ಕೆ ಅದ್ದೂರಿ ಕಾರ್ಯಕ್ರಮ :
ಡಿ.2 ರ ಶನಿವಾರ ದಂದು ಇಡೀ ದಿನ ವಿವಿಧ ಕಾರ್ಯಕ್ರಮಗಳು ಅನಾವರಣಗೊಳ್ಳಲ್ಲಿಕ್ಕಿದೆ . ಕಂಪ್ಯೂಟರ್ ಲ್ಯಾಬ್ , ಗ್ರಂಥಾಲಯ , ವಿಜ್ಞಾನ ಪ್ರಯೋಗಾಲಯ , ಕುಡಿಯುವ ನೀರಿನ ಘಟಕ , ಹೆಚ್ಚುವರಿ ತರಗತಿ ಉದ್ಗಾಟನೆಗೊಳ್ಳಲಿದೆ.

ಈ ಎಲ್ಲಾ ಕಾರ್ಯಕ್ರಮ ಉದ್ಗಾಟಕರಾಗಿ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಆಗಮಿಸುತ್ತಿದ್ದಾರೆ , ಸ್ಮರಣ ಸಂಚಿಕೆಯನ್ನು ವಿಧಾನ ಪರಿಷತ್ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ ಬಿಡುಗಡೆಗೊಳಿಸಲ್ಲಿದ್ದಾರೆ .ಶ್ರೀವಿಶ್ವ ಸಂತೋಷ ಭಾರತಿ ಗುರೂಜಿ ಶುಭಾಶಿರ್ವಚನವನ್ನು ನೀಡಲಿದ್ದಾರೆ . ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಯಶೋಧ ಶೆಟ್ಟಿಯವರು ವಹಿಸಿಕೊಳ್ಳಲ್ಲಿದ್ದಾರೆ . ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಯಡಿಯೂರಪ್ಪ ಬೈಂದೂರು ಶಾಸಕ ಕೆ. ಗೋಪಾಲ್ ಪೂಜಾರಿ ,ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿ ,ಜಿಲ್ಲಾ ಪಂಚಾಯತ್ ಸದಸ್ಯರಾದ ತಾರಾನಾಥ ಶೆಟ್ಟಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ .

Click here

Click here

Click here

Click Here

Call us

Call us

Leave a Reply