ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ನೆಲದ ಸಂಸ್ಕೃತಿ, ಸಂಪ್ರದಾಯ, ಆಚರಣೆಯನ್ನು ಬಿಂಬಿಸುವ ಸಲುವಾಗಿ ಕಾಣಿ ಸ್ಟುಡಿಯೋ ಕೋಟೇಶ್ವರ-ಬೆಂಗಳೂರು ಇವರ ಆಶ್ರಯದಲ್ಲಿ ಕೋಟೇಶ್ವರ ಕೊಡಿ ಹಬ್ಬದಲ್ಲಿ ತೃತೀಯ ವರ್ಷದ “ಕೊಡಿ ಹಬ್ಬ ಸೆಲ್ಫಿ ಹಬ್ಬ ಸೆಲ್ಫಿ ಪೋಟೋಗ್ರಫಿ ಸ್ಪರ್ಧೇ ಡಿ.3 ಬೆಳಿಗ್ಗೆ 6 ರಿಂದ ಡಿ.4ರ ಬೆಳಿಗ್ಗೆ 6 ರವರೆಗೆ ಜರುಗಲಿದೆ. ಐಸಿರಿ ಎಂಟರ್‌ಪ್ರೈಸಸ್, ಹನಿಕೊಂಬ್ ಗ್ರೂಪ್, ವರ್ಣ ಪ್ರೀಟಿಂಗ್, ರೋಟರಿ ಕ್ಲಬ್ ಕೋಟೇಶ್ವರ, ರೋಟರ‍್ಯಾಕ್ಟ್ ಕ್ಲಬ್ ಕೋಟೇಶ್ವರ, ಕೆನರಾ ಕಿಡ್ಸ್, ರಾಮನಾಥಗೋಳಿಕಟ್ಟೆ ಫ್ರೇಂಡ್ಸ್, ಐಶ್ವರ್ಯ ಡಿಜಿಟಲ್ ಸ್ಟುಡಿಯೋ, ಐಶ್ವರ್ಯ ಮೀಡಿಯಾ, ಯಶಸ್ವಿ ಶಾಮಿಯಾನ ವಕ್ವಾಡಿ, ಅಮಯ್ ಇವೆಂಟ್, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು ಇವರ ಪ್ರಾಯೋಜಕತ್ವದಲ್ಲಿ ಕಾಣಿ ಸ್ಟುಡೀಯೋ ಸಂಯೋಜನೆಯಲ್ಲಿ ಈ ಸೆಲ್ಫಿ ಪೋಟೋಗ್ರಫಿ ಸ್ಟರ್ಧೇ ಜರುಗಲಿದೆ.
ಸ್ಪರ್ಧೇಯ ವಿಷಯ:
ಕೊಡಿ ಹಬ್ಬದಲ್ಲಿ ವಿವಾಹಿತ ಜೋಡಿ, ಕೊಡಿ ಹಬ್ಬದ ಸಂಭ್ರಮದಲ್ಲಿ ಕುಟುಂಬ, ಕೊಡಿ ಹಬ್ಬದ ಸಂಭ್ರಮ ಎಂಬ ೩ ವಿಷಯಗಳಲ್ಲಿ ಸೆಲ್ಫಿ ಪೋಟೋಗ್ರಫಿ ಸ್ಟರ್ಧೇ ನಡೆಯಲಿದೆ.
ಸ್ಪರ್ಧೇಯ ನಿಯಮ:
ಈ ಸೆಲ್ಫಿ ಪೋಟೋಗಳಲ್ಲಿ ಕೊಡಿ ಹಬ್ಬ ಆಚರಣೆ ಬಿಂಬಿಸುವಂತಿರಬೇಕು. ಕೊಡಿ ಹಬ್ಬ ವಾತವರಣ ಬಿಟ್ಟು ಬೇರೆ ಸ್ಥಳದಲ್ಲಿ ತಗೆದ ಸೆಲ್ಫಿ ಪೋಟೋಗಳಿಗೆ ಅವಕಾಶ ಇರುವುದಿಲ್ಲ. ಒಬ್ಬರು ಒಂದೇ ಸೆಲ್ಫಿ ಪೋಟೋವನ್ನು ಅಪಲೋಡ್ ಮಾಡಬೇಕು.
ಆಯ್ಕೆಯಾದ 10 ಉತ್ತಮ ಸೆಲ್ಫಿ ಪೋಟೋಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಡಿ.೪ರಂದು ಕಾಣೀ ಸ್ಟುಡಿಯೋ ಫೇಸ್‌ಬುಕ್ ಪೇಜ್‌ನಲ್ಲಿ ಸಂಜೆ 4 ಗಂಟೆಗೆ ವಿಜೇತರ ಮಾಹಿತಿಯನ್ನು ತಿಳಿಸಲಾಗುವುದು. ರಾತ್ರಿ 9:30ಗೆ ಕೋಟೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗುವ ರಾಮನಾಥಗೋಳಿಕಟ್ಟೆ ಫ್ರೇಂಡ್ಸ್ ಇವರ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಗುವುದು.
ಪೋಟೋ ಅಪಲೋಡ್ ಮಾಡುವ ಕ್ರಮ:
ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನ್ನಲ್ಲಿ ಮಾತ್ರ ಈ ಸೆಲ್ಫಿ ಪೋಟೋಗ್ರಫಿ ಸ್ಟರ್ಧೇಗೆ ಅವಕಾಶ ಇರುತ್ತದೆ. ನಿಮ್ಮ ಫೇಸ್‌ಬುಕ್ ಅಂಕೌಟ್‌ನಲ್ಲಿ ADD PHOTOS ಕ್ಲಿಕ್ ಮಾಡಿ ನಿಮ್ಮ SELFIE ಪೋಟೋ ಒಂದನ್ನು OPEN ಮಾಡಿ #KODIHABBAKAANI ಅಂಥ ಟೈಪ್ ಮಾಡಿ WHO WERE YOU WITH ಇದರಲ್ಲಿ ನಿಮ್ಮ ಹೆಸರು ಟೈಪ್ ಮಾಡಿ PUBLIC OPTION ಕ್ಲಿಕ್ ಮಾಡಿ PಔSಖಿ ಕೊಡಿ. ಇಲ್ಲಿಗೆ ನಿಮ್ಮ ಪೋಟೋ ಅಪಲೋಡ್ ಮಾಡುವ ಕ್ರಮ ಮುಗಿಯುತ್ತದೆ.
ಸ್ಟರ್ಧಾಳುಗಳ ಗಮನಕ್ಕೆ:
ಅಜಾಗೃತೆಯಿಂದ ಅಪಾಯ ತರುವತಂಹ ಹಾಗೂ ಅಪಾಯಕ್ಕೆ ಒಳಾಗಾಗುವತಂಹ ಸೆಲ್ಫಿ ಪೋಟೋಗಳಿಗೆ ಪ್ರಯತ್ನಸಿಬೇಡಿ. ಹಬ್ಬದಲ್ಲಿ ಭಾಗವಹಿಸಿದ ಸಾರ್ವಜನಿಕರ ಮನಸ್ಸಿಗೆ ಕಿರಿಕಿರಿ ಆಗದಂತೆ ಸೆಲ್ಫಿ ಪೋಟೋ ತೆಗೆದು ಅಪಲೋಡ್ ಮಾಡಿ ಎಂದು ಸಂಘಟಕರು ತಿಳಿಸಿದ್ದಾರೆ.