ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಸುಮಾ ಫೌಂಡೇಶನ್ ನಾಗೂರು ಕುಸುಮಾಂಜಲಿ – 2017ರ ಪೂರ್ವಭಾವಿಯಾಗಿ ಆಯೋಜಿಸಿದ್ದ ಗಾನಕುಸುಮ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ಬ್ಲಾಸಮ್ ಸಂಗೀತ ನೃತ್ಯ ಶಾಲೆಯ ಕೆ.ಎ.ಎಸ್. ಆಡಿಟೊರಿಯಂನಲ್ಲಿ ನಡೆಯಿತು.
ಗಾನಕುಸುಮ – 2017ರ ಅಂತಿಮ ಸುತ್ತಿನಲ್ಲಿ ೧೫ ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಸೀನಿಯರ್ ವಿಭಾಗದಲ್ಲಿ ಕುಂದಾಪುರ ಭಂಡಾರಕಾರ‍್ಸ್ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಭಟ್ ಹಾಗೂ ಜೂನಿಯರ್ ವಿಭಾಗದಲ್ಲಿ ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವಿಶ್ವಜಿತ್ ಕಿಣಿ ತಮ್ಮದಾಗಿಸಿಕೊಂಡರು.
ಕುಸುಮಾಂಜಲಿ 2017ರ ಚಾನಲ್ ಪಾರ್ಟ್ನರ್ ಮುಂಬಯಿ ಶುಭಸಾಗರ್ ಹೋಟೆಲ್ ಮಾಲಿಕರಾದ ಲಕ್ಷ್ಮಣ ಪೂಜಾರಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಪ್ರಸಿದ್ಧ ಗಾಯಕ ಚಂದ್ರಶೇಖರ ಕೆದಿಲಾಯ, ಆಕಾಶವಾಗಿ ಕಲಾವಿದ ಗಣೇಶ ಗಂಗೊಳ್ಳಿ ಹಾಗೂ ಸಂಗೀತ ಪದವಿಧರೆ ಶ್ವೇತಾ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕುಸುಮ ಹೋಮ್ಸ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾದ ಕುಸುಮಾವತಿ ಎಸ್. ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಯು. ಪ್ರಭಾಕರ ಶೆಟ್ಟಿ ನಿವೃತ್ತ ಶಿಕ್ಷಕಿ ಸುಧಾಮೂರ್ತಿ, ಜನಾರ್ಧನ ಮರವಂತೆ, ಗಿರೀಶ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು. ಕುಸುಮ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ನಳಿನ ಕುಮಾರ ಶೆಟ್ಟಿ ಇವರು ಸ್ವಾಗತಿಸಿದರು. ಕುಸುಮ ಫೌಂಡೇಷನ್‌ನ ನಿರ್ದೇಶಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿದ್ಯಾ ವಂದಿಸಿದರು. ಕುಸುಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಾನಕುಸುಮ ಕಾರ್ಯಕ್ರಮವು ಕೇವಲ ಸ್ಪರ್ಧೆಯಾಗಿರದೇ, ಪ್ರತಿಭಾ ಪ್ರದರ್ಶನದ ವೇದಿಕೆಯಾಗಿದೆ. ಫೈನಲ್‌ಗೆ ಆಯ್ಕೆಯಾದ ಸ್ಪರ್ಧಿಗಳಿಗೆ ಕುಸುಮಾಂಜಲಿ-೨೦೧೭ ರಲ್ಲಿ ಹಾಡಲು ಅವಕಾಶ ಕಲ್ಪಿಸುದರ ಮೂಲಕ ಯುವ ಉದಯೋನ್ಮುಖ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಮಹತ್ವಾಕಂಕ್ಷೆಯ ಕಾರ್ಯಕ್ರಮವಾಗಿರುತ್ತದೆ ಹಾಗೂ ಮುಂದಿನ ವರ್ಷದಿಂದ ಗಾನಕುಸುಮ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವ ಯೋಜನೆ ಇದೆ. – ನಳಿನಕುಮಾರ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ, ಕುಸುಮ ಫೌಂಡೇಶನ್