ಲೋಕಾರ್ಪಣೆಗೆ ಸಿದ್ಧಗೊಂಡಿದೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ‘ರೈತ ಸಿರಿ’

Call us

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ರೈತ ಸಿರಿ ಲೋಕಾರ್ಪಣೆಗೆ ಸಜ್ಜುಗೊಂಡಿದ್ದು ಡಿ.14ರ ಗುರುವಾರ ಭವ್ಯ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಳ್ಳಲಿದೆ.

Call us

Click Here

Click here

Click Here

Call us

Visit Now

Click here

ರಾಜ್ಯ ಸಹಕಾರ ಸಚಿವ ರಮೇಶ ಜಾರಕಿಹೋಳಿ ಉದ್ಘಾಟಿಸಲಿದ್ದು, ಪ್ರಧಾನ ಕಛೇರಿಯನ್ನು ಮೀನುಗಾರಿಕೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಬ್ಯಾಂಕಿಂಗ್ ವಿಭಾಗವನ್ನು ಕ.ರಾ.ಸ.ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ವಹಿಸಲಿದ್ದಾರೆ. ರೈತಸಿರಿ ಸಭಾಭವನವನ್ನು ಶಾಸಕ ಕೆ.ಗೋಪಾಲ ಪೂಜಾರಿ, ರೈತರ ಉತ್ಪತ್ತಿ ದಾಸ್ತಾನು ಮತ್ತು ಕೃಷಿ ಸಲಕರಣೆ ಮಳಿಗೆಯನ್ನು ಮಾಜಿ ಸಚಿವ ವಿನಯಕುಮಾರ ಸೊರಕೆ, ನ್ಯಾಯಬೆಲೆ ಅಂಗಡಿಯನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ನೂತನ ಗಣಕೀಕರಣ ಕೇಂದ್ರವನ್ನು ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ, ಭದ್ರತಾ ಕೋಶವನ್ನು ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಉದ್ಘಾಟಿಸಲಿದ್ದಾರೆ.

ಸಂಜೆ 6 ಗಂಟೆಗೆ ಸಹಕಾರಿ ಸಂಜೆ-ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ವಹಿಸಲಿದ್ದು, ಹಿರಿಯ ಸಹಕಾರಿ, ಪ್ರಾ.ಸ.ಕೃಷಿ ಗ್ರಾಮೀಣಾಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ರಾತ್ರಿ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ-ಗಾನ-ನಾಟ್ಯ-ಯಕ್ಷ-ವೈಭವ ನಡೆಯಲಿದೆ.

ಸಂಘದ ನಡೆದು ಬಂದ ಹಾದಿ:
ಸರಕಾರದ ಆದೇಶದಂತೆ ದಿನಾಂಕ 1976ರಂದು ಶಿವರಾಮ ಭಟ್ ಇವರ ಅಧ್ಯಕ್ಷತೆಯಲ್ಲಿರುವ ಉಪ್ಪುಂದ ಎಸ್.ಸಿ ಬ್ಯಾಂಕ್, ಮಾಧವ ಹೆಬ್ಬಾರ ಇವರ ಅಧ್ಯಕ್ಷತೆಯಲ್ಲಿರುವ ಬಿಜೂರು ಎಸ್,ಸಿ ಬ್ಯಾಂಕ್ ಮತ್ತು ವೈ,ಚಂದ್ರಶೇಖರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿರುವ ಖಂಬದಕೋಣೆ ಸಿ.ಎ ಬ್ಯಾಂಕ್ ಮೂರು ಬ್ಯಾಂಕುಗಳು ವಿಲೀನಗೊಂಡು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಎಂಬ ಹೆಸರಿನಿಂದ ಸೂರ್ಯನಾರಾಯಣ ಹೊಳ್ಳರ ಅಧ್ಯಕ್ಷತೆಯಲ್ಲಿ ಹೊಸದಾಗಿ ಕಾರ್ಯಾರಂಭಗೊಂಡಿತು.

ಪ್ರಸ್ತುತ ಸಂಘವು 12,707 ಎ ವರ್ಗದ ಸದಸ್ಯರು 3,758 ಸಹಸದಸ್ಯರನ್ನು ಹಾಗೂ 4,919 ಸಾಲ ಸಂಯೋಜಿತ ಸ್ವಸಹಾಯ ಸಂಘದ ಸದಸ್ಯರನ್ನು ಹೊಂದಿದೆ. ರೂ.1.60 ಕೋಟಿ ಪಾಲು ಬಂಡವಾಳ ಹೊಂದಿದ್ದು, ರೂ.102.10 ಕೋಟಿ ಸದಸ್ಯರ ಠೇವಣಿ, ರೂ.99.65 ಕೋಟಿ ಸದಸ್ಯರ ಹೊರಬಾಕಿಸಾಲ ಇರುತ್ತದೆ. ವಿವಿಧ ಸಹಕಾರಿನ ಬ್ಯಾಂಕುಗಳಲ್ಲಿ ರೂ.೩೭.೫೫ ಕೋಟಿ ಹೂಡಿಕೆ ಮಾಡಲಾಗಿದೆ. ರೂ.೧೨.೫೭ ಕೋಟಿ ನಿಧಿಯನ್ನು ಹೊಂದಿದ್ದು, ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ೨.೮೨ ಕೋಟಿ ಲಾಭ ಗಳಿಸಿ ಪ್ರತೀ ವರ್ಷ ಶೇ.15 ಲಾಭಾಂಶವನ್ನು ನೀಡುತ್ತಿದೆ.

Call us

ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯ:
ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನಮ್ಮ ಸಂಘವು ಕ್ರಷಿಕ ಸದಸ್ಯರಿಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುತ್ತಿದೆ. ರೈತ ಸೇವಾ ಕೂಟವನ್ನು ರಚಿಸಿದ್ದು ಇದರ ಸಹಯೋಗದೊಂದಿಗೆ ಕ್ರಷಿ ಮತ್ತು ಕ್ರಷಿಯೇತರ ಚಟುವಟಿಕೆಗಳ ಉಪಯುಕ್ತ ಮಾಹಿತಿ, ತರಬೇತಿ ಕಾರ್ಯಗಾರ, ವೈದ್ಯಕೀಯ ಚಿಕಿತ್ಸಾ ಶಿಬಿರ ಮತ್ತು ಸ್ವ ಸಹಾಯ ಸಂಘದ ಸದಸ್ಯರಿಗೆ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೃಷಿ ಅಧ್ಯಯನ ಪ್ರವಾಸ ನಡೆಸಲಾಗುತ್ತಿದೆ. ಸಾಲಗಾರ ಸದಸ್ಯರಿಗೆ ವಿಮಾ ಭದ್ರತೆ, ಯಶಸ್ವಿನಿ ವಿಮಾ ಯೋಜನೆಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ವಿವಿಧ ಸಂಘಟನೆಗಳ ಕಂಬಳ, ಕ್ರಷಿ ಉತ್ಸವ ಇತ್ಯಾದಿ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡುತ್ತಿರುವುದಲ್ಲದೆ ತಾಲೂಕು ಮಟ್ಟದ ಕೃಷಿ ಮೇಳದಲ್ಲಿ ಸಹಭಾಗಿತ್ವವನ್ನು ನೀಡಲಾಗಿದೆ. ನಿವೃತ್ತ ಸಹಕಾರಿ, ಸರಕಾರಿ ಅಧಿಕಾರಿಗಳನ್ನು, ವಿವಿಧ ಪ್ರಗತಿಪರ ರೈತರು ಮತ್ತು ಹಾಲು ಉತ್ಪಾದಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಸಂಘದ ವ್ಯವಹಾರ ಕ್ಷೇತ್ರದ ೩೫ ಶಾಲೆಗಳ ೩೨೦೦ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಗಿದ್ದು, ಗೌರವ ಶಿಕ್ಷಕರಿಗೆ ಗೌರವಧನ ವಿತರಿಸಲಾಗಿದೆ. ಸರಕಾರಿ ಶಾಲೆಗಳಿಗೆ ಸಹಾಯಧನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಿದೆ.

ಸಂಘಕ್ಕೆ ಪ್ರಶಸ್ತಿ:
ಸಂಘವು ನಾಲ್ಕು ಶಾಖೆಗಳಲ್ಲಿ ಸ್ವಂತ ಕಟ್ಟಡ ಹೊಂದಿದ್ದು, ಪ್ರಸ್ತುತ ರೂ. 2 ಕೋಟಿ ವೆಚ್ಚದಲ್ಲಿ ಪ್ರಧಾನ ಕಛೇರಿಯ ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ. ಸಂಘದ ಕಾರ್ಯಚಟುವಟಿಕೆಗಳನ್ನು ಗಮನಿಸಿ 2001ರಿಂದ ಸತತವಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿ, ವಿವಿಧ ಇಲಾಖೆಗಳಿಂದಲೂ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ ಸಂಘವು ಅತ್ಯುತ್ತಮ ಕೃಷಿ ಪತ್ತಿನ ಸಹಕಾರ ಸಂಘವೆಂಬ ಪಾರಿತೋಷಕ ಪಡೆದಿದೆ.

ಕುಂದಾಪುರ ತಾ.ಪಂ.ಮಾಜಿ ಅಧ್ಯಕ್ಷರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕರು, ದ.ಕ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ನಿರ್ದೇಶಕರು, ಪ್ರಗತಿಪರ ಕೃಷಿಕರು, ಅನುಭವಿ ಸಹಕಾರಿ ಆಗಿರುವ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರು ಕಳೆದ 20ವರ್ಷಗಳಿಂದ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನುಭವಿ ನಿರ್ದೇಶಕ ಮಂಡಳಿ ಮಾರ್ಗದರ್ಶನದಲ್ಲಿ ನೌಕರರ ಪ್ರಾಮಾಣಿಕ ದುಡಿಮೆಯಿಂದ ಬ್ಯಾಂಕು ಗಮನಾರ್ಹ ಪ್ರಗತಿ ಸಾಧಿಸಿದೆ.

 

Leave a Reply

Your email address will not be published. Required fields are marked *

14 − eight =