ರಾಜ್ಯ ಸರಕಾರದಿಂದ ಹಿಂದು ಕಾರ್ಯಕರ್ತರನ್ನು ಮಣಿಸುವ ವ್ಯವಸ್ಥಿತ ಸಂಚು: ಶ್ರೀಧರ ಬಿಜೂರು

Click Here

Call us

Call us

Call us

ಕುಂದಾಪ್ರಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯದಲ್ಲಿಕಾಂಗ್ರೆಸ್ ಸರಕಾರಅಧಿಕಾರಕ್ಕೆ ಬಂದ ಬಳಿಕ ವ್ಯವಸ್ಥಿತವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನುಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ.ಇದನ್ನು ಪ್ರಶ್ನಿಸುವವರನ್ನು ಕಾನೂನಿನ ಮೂಲಕ ಕಟ್ಟಿಹಾಕುವ ಕೆಲಸವನ್ನು ಮಾಡುತ್ತಿದೆಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದಅಧ್ಯಕ್ಷ ಶ್ರೀಧರ ಬಿಜೂರು ಹೇಳಿದರು.

Call us

Click Here

ಅವರು ಹೊನ್ನಾವರ ಪರೇಶ್ ಮೇಸ್ತ ಅವರಅನುಮಾನಾಸ್ಪದ ಸಾವು ಹಾಗೂ ರಾಜ್ಯ ಸರಕಾರದ ಹಿಂದೂ ವಿರೋಧಿ ನಿಲುವು ಖಂಡಿಸಿ ಬೈಂದೂರುಆಂಜನೇಯದೇವಸ್ಥಾನದಆವರಣದಲ್ಲಿಜರುಗಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಹಿಂದುಕಾರ್ಯಕರ್ತರು ಹಾಗೂ ಅಮಾಯಕರನ್ನು ಕೊಲೆ ಮಾಡಿ ಬಳಿಕ ಅದನ್ನು ಸಹಜ ಸಾವು ಎಂದು ಬಿಂಬಿಸುವ ಷಡ್ಯಂತ್ರ ನಡೆದಿದೆ. ಹೊನ್ನಾವರದ ಪರೇಶ್ ಮೇಸ್ತನನ್ನು ಹತ್ಯೆಮಾಡಿ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ. ಪ್ರತಿಭಟನೆಯನ್ನುತಡೆದು ಹಿಂದೂಕಾರ್ಯಕರ್ತರ ಬಲ ಕುಗ್ಗಿಸಲು ಸಾಧ್ಯವಿಲ್ಲ. ಹಿಂದೂಕಾರ್ಯಕರ್ತರು ಸಂಘಟಿತರಾಗಿ ಮುಂದುವರಿದು ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ಗೋಪಾಲಕೃಷ್ಣ ಕೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ತನಕ ಹಿಂದೂಗಳಿಗೆ ರಕ್ಷಣೆ ಇಲ್ಲ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸುವುದರಿಂದ ಈವರೆಗೆ ನ್ಯಾಯ ದೊರೆತಿಲ್ಲ. ಶಸ್ತ್ರ ಹಿಡಿದಿರುವವರ ಎದುರು ಶಾಸ್ತ್ರ ಓದುತ್ತಾ ಕುಳಿತರೆ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲದು. ಎಲ್ಲಾ ಪಕ್ಷ ಜಾತಿಯನ್ನು ಮರೆತು ನಾವು ಮೊದಲು ಒಂದಾಗಬೇಕಿದೆ. ಹಿಂದುವಿಗಾದ ಅನ್ಯಾಯಕ್ಕೆ ಒಂದಾಗಿ ನಿಲ್ಲುತ್ತೆವೆ ಎಂಬ ಪ್ರತಿಜ್ಞೆ ತೆಗೆದುಕೊಳ್ಳಬೇಕಿದೆ ಎಂದರು.

ಮೃತರಾದ ಹೊನ್ನಾವರದ ಪರೇಶ್ ಮೇಸ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ತಾಲೂಕು ಪಂಚಾಯತ್ ಸದಸ್ಯ ಪುಪ್ಪರಾಜ್ ಶೆಟ್ಟಿ, ಬಜರಂಗಳ ಗೋರಕ್ಷದಳದ ಪ್ರಮುಖ್‌ಜಗದೀಶ್‌ಕೊಲ್ಲೂರು, ತಾಲೂಕು ಸಂಚಾಲಕ ನಿತ್ಯಾನಂದ, ಬೈಂದೂರು ಬಿಜೆಪಿ ಯುವಮೋರ್ಚಾಅಧ್ಯಕ್ಷ ಶರತ್ ಶೆಟ್ಟಿಉಪ್ಪುಂದ, ಸತೀಶ್ ನಾಯ್ಕ್, ಎಬಿವಿಪಿಯ ಪುನಿತ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    

Click here

Click here

Click here

Click Here

Call us

Call us

Leave a Reply