ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಪಡುವರಿ ಗ್ರಾಮ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಸೋಮೇಶ್ವರದಲ್ಲಿ ಜರುಗುತ್ತಿರುವ ಬೈಂದೂರು ಬೀಚ್ ಉತ್ಸವ 2017ರ ವಿವಿಧ ಕಾರ್ಯಕ್ರಮಗಳು ಹಾಗೂ ಸ್ವರ್ಧೆಗಳಿಗೆ ಗಾಳಿಪಟ ಉತ್ಸವದ ಮೂಲಕ ಚಾಲನೆ ದೊರೆಯಿತು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೈಂದೂರು ಸುತ್ತಲಿನ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಹಿನ್ನೆಡೆಯನ್ನು ಕಂಡಿದ್ದು ಆದರೆ ಈ ಉತ್ಸವದ ಮೂಲಕ ಅದಕ್ಕೊಂದು ವೇಗ ದೊರೆತಿದೆ ಎಂದರು.
ಗಾಳಿಪಟ ಉತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಗುಡೇಮನೆ ನಾಗಪ್ಪ ಶೇರುಗಾರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಪಡುವರಿ ಗ್ರಾ.ಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಪಡುವರಿ ಗ್ರಾ.ಪಂ.ಸದಸ್ಯರಾದ ಮಾಣಿಕ್ಯ ಹೋಬಳಿದಾರ್, ಎಸ್. ತಿಮ್ಮಪ್ಪ, ಶಿವರಾಮ ಪೂಜಾರಿ, ಸೋಡಿತಾರ್ ಸುಬ್ರಾಯ ಶೇರುಗಾರ್, ಸಂಜು ದೇವಾಡಿಗ, ಶ್ರೀ ರಾಮ ಭಜನಾ ಮಂಡಳಿ ಸೋಮೇಶ್ವರ ಇದರ ಅಧ್ಯಕ್ಷ ಪರಮೇಶ್ವರ, ಬೆಸುಗೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ್ ಕಿಣಿ, ಕೋಶಾಧ್ಯಕ್ಷ ಗೋಪಾಲಕೃಷ್ಣ ಶಿರೂರು, ಖಂಜಾಚಿ ಜಯಾನಂದ ಹೋಬಳಿದಾರ್, ಮೊದಲಾದವರು ಉಪಸ್ಥಿತರಿದ್ದರು.
ಬೆಸುಗೆ ಫೌಂಡೇಶನ್ ಇದರ ಸಂಚಾಲಕ ಸದಾಶಿವ ಡಿ. ಸ್ವಾಗತಿದರು. ಕಾರ್ಯದರ್ಶಿ ಗಣಪತಿ ಹೋಬಳಿದಾರ್ ವಂದಿಸಿದರು. ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮರಳುಶಿಲ್ಪ ಅನಾವರಣಗೊಳಿಸಿದರು. ಸೌಖ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರವರ್ತಕ ರಿಯಾಜ್ ಅಹಮ್ಮದ್ ಸೂಪರ್ ಸೆಲ್ಫಿ ಸ್ವರ್ಧೆಗೆ ಚಾಲನೆ ನೀಡಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.