ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀದುರ್ಗಾ ನೃತ್ಯ ಅಕಾಡೆಮಿ ಮೈಸೂರು ಇವರು ಏರ್ಪಡಿಸಿದ ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ 4 ವಿಭಾಗಗಳಲ್ಲಿ ಕೇರಳ, ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 200ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಸಂಸ್ಥೆಯಿಂದ ಸ್ಪರ್ಧಿಸಿದ 8 ಮಕ್ಕಳು ಬಹುಮಾನ ಗಳಿಸಿ ಅಚ್ಚರಿಗೊಳಿಸಿದ್ದಾರೆ.
ಸಬ್ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ ಕುಮಾರಿ ಗಾರ್ಗಿದೇವಿ ಪ್ರಥಮ ಸ್ಥಾನ ಪಡೆದು ನಾಟ್ಯ ಮಯೂರಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಜೂನಿಯರ್ ವಿಭಾಗದಲ್ಲಿ ನಿಯತಿ.ಎಚ್.ಕೆ ಪ್ರಥಮ ಸ್ಥಾನಿಯಾಗಿ ನಾಟ್ಯವರ್ಷಿಣಿ ಪ್ರಶಸ್ತಿ ಗಳಿಸಿದ್ದಾಳೆ. ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ ಬಿ.ಯುಕ್ತಿ ಉಡುಪ ತೃತೀಯ ಸ್ಥಾನ ಗಳಿಸಿದ್ದಾಳೆ. ಓಪನ್ ಕ್ಯಾಟಗರಿಯಲ್ಲಿ ಭಾಗವಹಿಸಿದ ಮೈತ್ರಿ ಪಿ.ಆರ್ ಪ್ರಥಮ ಸ್ಥಾನ ಪಡೆದು ನಾಟ್ಯ ರತ್ನ ಪ್ರಶಸ್ತಿಗಳಿಸಿರುತ್ತಾರೆ. ಎಲ್ಲ್ಲಾ ವಿಭಾಗಗಳಲ್ಲಿ ಕಠಿಣ ಸ್ಪರ್ಧೆ ಇದ್ದು ವಿಶೇಷವೆಂದರೆ ಜೂನಿಯರ್ ವಿಭಾಗದಲ್ಲಿ ೮೫ ಸ್ಪರ್ಧಿಗಳಿದ್ದು ನೃತ್ಯ ವಸಂತ ನಾಟ್ಯಾಲಯದಿಂದ ಸ್ಪರ್ಧಿಸಿದ 5 ವಿದ್ಯಾರ್ಥಿಗಳು ಪ್ರಥಮ ದ್ವಿತೀಯ, ತೃತೀಯ, ಚತುರ್ಥ, ಪಂಚಮ ಸ್ಥಾನಿಯಾಗಿ ಹೊರಹೊಮ್ಮಿರುವುದು ವಿಶೇಷವಾಗಿದೆ. ಪ್ರಥಮ ನಿಯತಿ ಎಚ್.ಕೆ, ದ್ವಿತೀಯ ಪೂರ್ವಿಕ, ತೃತೀಯ ಬಿ.ಸುನಿಧಿ ಉಡು, ಚತುರ್ಥ ವರ್ಷ ಹೆಗ್ಡೆ, ಪಂಚಮ ಮೇಧ ನಾವಡ ಎಲ್ಲ ವಿಜೇತರು ಶ್ರೀ ಕುಂದೇಶ್ವರನ ಕೃಪೆ ಹಾಗೂ ಗುರುವಿದೂಷಿ ಪ್ರವೀತಾ ಅಶೋಕರ ಮಾರ್ಗದರ್ಶನಕ್ಕೆ ಕೃತಜ್ಞತೆ ಅರ್ಪಿಸಿದರು.