ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಭೆ, ಸಮಾರಂಭ, ವಾರ್ಷಿಕೋತ್ಸವ, ಭಾಷಣಗಳಿಂದ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಸಮುದಾಯದ ಪ್ರತಿಯೊಬ್ಬ ಸದಸ್ಯರು ತಮ್ಮೊಡನೆ ಇತರರನ್ನು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ರೀತಿ ಒಗ್ಗಟ್ಟಿನಿಂದ ಎಲ್ಲರೂ ಬೆಳೆದಾಗ ಮಾತ್ರ ಸಮುದಾಯ ಬಲಿಷ್ಠವಾಗಲು ಸಹಕಾರಿಯಾಗುತ್ತದೆ. ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಕೆ, ಗೋಪಾಲ ಪೂಜಾರಿ ಹೇಳಿದರು.
ನಾಗೂರಿನ ಮಹಾಲಸಾ ಕಲ್ಚರಲ್ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಅರ್ಧವಾರ್ಷಿಕ ಪ್ರಾದೇಶಿಕ ಮಹಾಸಭೆಯಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ಸಮಾಜದಲ್ಲಿ ನಡೆಯುವ ಕೆಟ್ಟ ಚಟುವಟಿಕೆಗಳಲ್ಲಿ ಸಮುದಾಯದ ಯುವ ಜನತೆ ಪಾಲ್ಗೋಳುತ್ತಿರುವುದು ಆತಂಕಕಾರಿಯಾಗಿದೆ. ಹೆತ್ತವರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳು ದಾರಿ ತಪ್ಪುತ್ತಿರುವ ಕಾರಣದ ಬಗ್ಗೆ ಸಂಘದ ಹಿರಿಯರು ಚರ್ಚಿಸಬೇಕು ಇಲ್ಲದಿದ್ದರೆ ಸಮುದಾಯ ಅಭಿವೃದ್ದಿಗೆ ಮಾರಕವಾಗಲಿದೆ. ಯುವಕರು ವಿವಿಧ ವೃತ್ತಿಗಲ್ಲಿ, ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಆ ಮೂಲಕ ಸಮುದಾಯಕ್ಕೆ ಗೌರವ ತಂದು ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆವ ಹಿಸಿದ್ದರು. ತಾಲೂಕು ಬಿಲ್ಲವರ ಸಂಘದ ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಶಾಸಕ ಕೆ. ಗೋಪಾಲ ಪೂಜಾರಿ, ತಾಲೂಕು ಬಿಲ್ಲವ ಸಂಘದ ಗೌರವಾಧ್ಯಕ್ಷ ಸುರೇಶ ಎಸ್. ಪೂಜಾರಿ, ರಾಜ್ಯ ಪ್ರಶಸ್ತಿ ವಿಜೆತ ನಟ, ನಿರ್ದೇಶಕ ಡಾ. ರಾಜಶೇಖರ ಕೊಟ್ಯಾನ್, ರಾಜ್ಯಮಟ್ಟದ ಅತ್ಯತ್ತಮ ಸಹಕಾರಿ ಪ್ರಶಸ್ತಿ ಪಡೆದ ಎಸ್. ರಾಜು ಪೂಜಾರಿ, ಬಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ಉಡುಪಿ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ನಾಗರಾಜ ಪೂಜಾರಿ, ಉಡುಪಿ ಜಿಲ್ಲಾ ಆಸ್ಪತ್ರೆ ಮಾನಸಿಕ ತಜ್ಞ ವಾಸುದೇವ ಎಸ್., ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಚಿಕ್ಮರಿ, ಡಾ. ಪ್ರೇಮಾನಂದ ಕೆ., ಮುಂಬಯಿ ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ ಬಿಜೂರು, ಲಕ್ಷ್ಮಣ ಪೂಜಾರಿ ತೆಂಕಬೆಟ್ಟು, ಕೃಷ್ಣ ಪೂಜಾರಿ, ಮಹೇಶ ಪೂಜಾರಿ, ಪರಮೇಶ್ವರ ನಾಗ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾಬು ಜೆ. ಪೂಜಾರಿ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಶಂಕರ ಪೂಜಾರಿ ಕಾಡಿನ್‌ತಾರು, ಅಕ್ಷತಾ ಪೂಜಾರಿ, ಜ್ಯೋತಿಕಾ ಪೂಜಾರಿ ಕಾಡಿನ್‌ತಾರು, ರಾಷ್ಟ್ರಮಟ್ಟದ ಯೋಗಪಟು ಮರವಂತೆ ಕುಶ ಪೂಜಾರಿ ಇವರನ್ನು ಸಮ್ಮಾನಿಸಲಾಯಿತು. ಅನಾರೋಗ್ಯ ಪೀಡಿತರಿಗೂ ಆರ್ಥಿಕ ನೆರವು ನೀಡಲಾಯಿತು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಗೌರವ ಪ್ರಧಾನ ಕಾರ‍್ಯದರ್ಶಿ ಮೋಹನದಾಸ್ ಪಾವೂರು ಭಂಡಾರಮನೆ, ಕೋಶಾಧಿಕಾರಿ ಯೋಗೀಶ ಕೋಟ್ಯಾನ್, ಸದಸ್ಯ ನಿತ್ಯಾನಂದ ಪೂಜಾರಿ, ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮಾಣಿ ಗೋಪಾಲ, ನಾವುಂದ ಶುಭದಾ ಆಂಗ್ಲಮಾಧ್ಯಮ ಶಾಲೆ ಸ್ಥಾಪಕ ಎನ್. ಕೆ. ಬಿಲ್ಲವ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಜಯಂತಿ ವಿಜಯಕೃಷ್ಣ ಪಡುಕೋಣೆ, ಉಪ್ಪುಂದ ಕಾರ್ಯಕಾರಿ ಮಂಡಳಿ ಸದಸ್ಯ ವಾಸುದೇವ ಎಸ್. ಪೂಜಾರಿ, ಮುಂಬ ಉದ್ಯಮಿ ಮಹೇಶ ಪೂಜಾರಿ ಬಂದೂರು ಮೊದಲಾದವರು ಉಪಸ್ಥಿರಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಸಹಕಾರ‍್ಯದರ್ಶಿ ಗಣೇಶ ಎಲ್. ಪೂಜಾರಿ ಸ್ವಾಗತಿಸಿದರು. ಅರುಣ ಕುಮಾರ್ ಕಾರ‍್ಯಕ್ರಮ ನಿರೂಪಿಸಿದರು. ಆನಂದ ಪೂಜಾರಿ ವಂದಿಸಿದರು.