ತ್ಯಾಗದ ಮೂಲಕ ಆಧ್ಯಾತ್ಮದ ತುತ್ತತುದಿಯನ್ನು ತಲುಪಲು ಸಾಧ್ಯ: ಮಂಗೇಶ ಶೆಣೈ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಪ್ರತಿ ತಿಂಗಳು ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ಬೋಧನೆ ಕಾರ್ಯಕ್ರಮವು ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆಯಿತು.

Call us

Click Here

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಧಾರ್ಮಿಕ ಚಿಂತಕ ಮಂಗೇಶ ಶೆಣೈ ಯಳಜಿತ್ ಮಾತನಾಡಿ ಜೀವನದಲ್ಲಿ ತ್ಯಾಗದ ಮೂಲಕ ಆಧ್ಯಾತ್ಮದ ತುತ್ತತುದಿಯನ್ನು ತಲುಪಲು ಸಾಧ್ಯವಿದೆ. ಶ್ರೀಮದ್ ಭಗವದ್ಗೀತೆಯ ೯ನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮನು ವಿವರಿಸಿದ ರಹಸ್ಯವಾದ ವಿದ್ಯೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಎಲ್ಲಾ ವಿದ್ಯೆಗಳ ರಾಜನಂತಿರುವ ಈ ವಿದ್ಯೆಯನ್ನು ಅರಿಯುವುದರಿಂದ ಎಲ್ಲಾ ವಿದ್ಯೆಗಳನ್ನು ಕಲಿಯಲು ಸಾಧ್ಯ. ನಿಸ್ವಾರ್ಥವಾಗಿ ನಮ್ಮ ಕರ್ತವ್ಯವನ್ನು ಮಾಡಿ ಅದನ್ನು ಪರಮಾತ್ಮನಿಗೆ ಶ್ರದ್ಧೆಯಿಂದ ಅರ್ಪಿಸಬೇಕು ಎಂದರು. ಭಗವದ್ಗೀತೆಯ ೧೦ನೇ ಅಧ್ಯಾಯದ ವಿಭೂತಿ ಯೋಗ ಪಠಣ ನಡೆಯಿತು. ವಿದ್ಯಾರ್ಥಿಗಳಾದ ಬಿ.ಪ್ರಾರ್ಥನಾ ಪೈ, ಎನ್.ಚೇತನಾ ನಾಯಕ್ ಮತ್ತು ಅಗ್ನೇಶ್ ನಾಯಕ್ ಅವರು ಭಗವದ್ಗೀತೆಯ ೯ನೇ ಅಧ್ಯಾಯದ ಶ್ಲೋಕವನ್ನು ಪಠಿಸಿದರು. ನಿನಾದ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply