ರಾಷ್ಟ್ರೀಯ ಅಬಾಕಸ್ ಎಂಡ್ ಮೆಂಟಲ್ ಅರಿತ್‌ಮೆಟಿಕ್ ಸ್ಪರ್ಧೆ: ಪ್ರಸನ್ನಾ ಪೈ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಆಶ್ರಯದಲ್ಲಿ ಕೇರಳದ ತ್ರಿಶೂರ್‌ನಲ್ಲಿ ಜರಗಿದ ೧೩ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಎಂಡ್ ಮೆಂಟಲ್ ಅರಿತ್‌ಮೆಟಿಕ್ ಸ್ಪರ್ಧೆ ಮತ್ತು ೯ನೇ ರಾಷ್ಟೀಯ ಮಟ್ಟದ ಸ್ಪೀಡ್ ಅರಿತ್‌ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಪ್ರಸನ್ನಾ ಪೈ ಅವರು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

Call us

Click Here

ರಾಜ್ಯ ಮಟ್ಟದ ಅಬಾಕಸ್ ಎಂಡ್ ಮೆಂಟಲ್ ಅರಿತ್‌ಮೆಟಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಈಕೆ ಗಂಗೊಳ್ಳಿಯ ಪತ್ರಕರ್ತ ಬಿ.ರಾಘವೇಂದ್ರ ಪೈ ಮತ್ತು ರಾಧಿಕಾ ಆರ್.ಪೈ ದಂಪತಿ ಪುತ್ರಿ. ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಕುಂದಾಪುರ ವಿಭಾಗದ ಪ್ರಸನ್ನ ಕೆ.ಬಿ. ಮತ್ತು ಮಹಾಲಕ್ಷ್ಮೀ ಪ್ರಸನ್ನ ತರಬೇತಿ ನೀಡಿದ್ದರು.

Leave a Reply