ಗೋಪಾಡಿ ಗರ್ಭಿಣಿ ಮಹಿಳೆಯ ಅತ್ಯಾಚಾರ ಪ್ರಕರಣ: ಆರೋಪಿಗೆ ಮರಣ ದಂಡನೆ ಶಿಕ್ಷೆ ಪ್ರಕಟ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಫೆ.20: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತಾಲೂಕಿನ ಪಡುಗೋಪಾಡಿಯ ಗರ್ಭಿಣಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಪ್ರಶಾಂತ ಮೊಗವೀರ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Call us

Click Here

                 ಮೃತ ಇಂದಿರಾ ಮೊಗವೀರ

ಆರೋಪಿಯು ಮನೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿದ್ದಕ್ಕಾಗಿ 448 ಸೆಕ್ಷನ್‌ನಲ್ಲಿ ಒಂದು ವರ್ಷ ಕಠಿಣ ಸಜೆ, ಅಪರಣ ಮಾಡುವ ಉದ್ದೇಶದಿಂದ ಮನೆಯೊಳಕ್ಕೆ ಪ್ರವೇಶಿಸಿದ್ದಕ್ಕಾಗಿ 4 ವರ್ಷ ಕಠಿಣ ಸಜೆ, ಕರಿಮಣಿ ಸರ ಅಪಹರಿಸಿದಕ್ಕಾಗಿ 10 ವರ್ಷ ಕಠಿಣ ಸಜೆ, ಅತ್ಯಾಚಾರ ಮಾಡಿದ್ದಕ್ಕಾಗಿ 10 ವರ್ಷ ಕಠಿಣ ಸಜೆ ಹಾಗೂ ಮಹಿಳೆಯ ಕೊಲೆ ಹಾಗೂ ಭ್ರೂಣ ಹತ್ಯೆ ಮಾಡಿರುವುದಕ್ಕಾಗಿ 302 ಸೆಕ್ಷನ್ ಅಡಿಯಲ್ಲಿ ಮರಣ ದಂಡಣೆ ಶಿಕ್ಷೆ ವಿಧಿಸಲಾಗಿದೆ. ಮೃತ ಮಹಿಳೆಯ ಕುಟುಂಬದ ಪರ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.

ಪ್ರಕರಣದ ವಿವರ:
ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿಯ ಸಮುದ್ರ ಕಿನಾರೆ ಸಮೀಪದ ನಿವಾಸಿಯಾಗಿದ್ದ ಗರ್ಭಿಣಿ ಇಂದಿರಾ ಮೊಗವೀರ ಮೇಲೆ 2015ರ ಎಪ್ರಿಲ್ 11ರಂದು ಅತ್ಯಾಚಾರಗೈದು ತಲೆಗೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇಂದಿರಾ ಸಣ್ಣ ಮಗುವಿನೊಂದಿಗೆ ಮನೆಯಲ್ಲಿದ್ದ ಸಂದರ್ಭ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿದ್ದ ಆರೋಪಿ ಆಕೆಯ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಬಳಿಕ ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ಆರೋಪಿ ಪ್ರಶಾಂತ ಮೊಗವೀರನನ್ನು ಘಟನೆ ನಡೆದ ದಿನವೇ ಬಂಧಿಸಿದ್ದರು. ಬರ್ಬರ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಈ ವೇಳೆ ಪ್ರತಿಭಟನೆ ನಡೆಸಿದ್ದವು. ಪ್ರಕರಣದ ಗಂಭೀರತೆ ಹಾಗೂ ಮೃತ ಮಹಿಳೆಯ ಕುಟುಂಬಸ್ಥರ ಕೋರಿಕೆಯ ಮೇರೆಗೆ ಕುಂದಾಪುರದ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರರನ್ನು ವಿಶೇಷ ಸರಕಾರಿ ಅಭಿಯೋಜನಕರಾಗಿ ನೇಮಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಫೆ.14ರಂದು ಆರೋಪಿ ಪ್ರಶಾಂತ ಮೊಗವೀರನನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆಯನ್ನು ಕಾದಿರಿಸಿತ್ತು. ಇಂದು ಕಠಿಣ ಮರಣದಂಡನೆ ಶಿಕ್ಷೆ ಪ್ರಕಟವಾಗಿದೆ.

ಮಹಿಳೆಯ ಕೊಲೆ ಎರಡನೇ ಪ್ರಕರಣಕ್ಕೆ ಮರಣ ದಂಡನೆ:

Click here

Click here

Click here

Click Here

Call us

Call us

ವರ್ಷದ ಹಿಂದಷ್ಟೇ ಶಾಲಾ ವಾಹನದ ನಿರ್ವಹಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದಾಗ ಪ್ರಕರಣ ರದ್ದಾಗಿ ಶಿಕ್ಷೆಯಿಂದ ಪಾರಾಗಿದ್ದನು.

 

Leave a Reply