ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೈಂದೂರು ಭಾಗಕ್ಕೆ ಕೇಂದ್ರ ಮೀಸಲು ಪೋಲಿಸ್ ಪಡೆ ಆಗಮಿಸಿದೆ.ಕುಂದಾಪುರ ತಾಲೂಕಿಗೆ 40 ಜನರ ಸಿ.ಆರ್.ಪಿ.ತಂಡ ಆಗಮಿಸಿದೆ.ತಾಲೂಕಿನ ಸುತ್ತಮುತ್ತ ಭಾಗಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಉದ್ದೇಶದಿಂದ ಬೈಂದೂರು ಹಾಗೂ ಶಿರೂರಿನ ವಿವಿಧ ಭಾಗಗಳಲ್ಲಿ ಸ್ಥಳೀಯ ಪೋಲಿಸರೊಂದಿಗೆ ಸಿ.ಆರ್.ಪಿ ತಂಡದವರು ಪಥಸಂಚಲನ ನಡೆಸಿದರು.ಈ ಕುರಿತು ಪ್ರತಿಕ್ರಯಿಸಿದ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಮೊದಲ ಹಂತದಲ್ಲಿ 40 ಜನರ ತಂಡ ಪಥ ಸಂಚಲನ ನಡೆಸುವುದರ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಗಿದೆ.ಉಳಿದ ಪೋಲಿಸ್ ತಂಡಗಳಿಂದ ಪ್ಯಾರಾಮಿಲಿಟರಿ ತಂಡಗಳು ನಿಯೋಜನೆಗೊಂಡ ಬಳಿಕ ಕ್ಷೇತ್ರದ ವಿವಿಧ ಭಾಗಗಳಿಗೂ ಪಥಸಂಚಲನ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.











