ಕುಂದಾಪ್ರ ಡಾಟ್ ಕಾಂ ಸುದ್ದಿ
ದುಬೈ: ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈ ಇದರ ವಾರ್ಷಿಕ ಸ್ನೇಹ ಸಮ್ಮೀಲನ ಕಾರ್ಯಕ್ರಮ ದುಬೈನ ಕ್ರೌನ್ ಪ್ಲಾಜಾದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಮ್ಮ ಕುಂದಾಪ್ರ ಪ್ರಧಾನ ಪೋಷಕ ವರದರಾಜ್ ಶೆಟ್ಟಿ ಜಾಗತಿಕ ಮಟ್ಟದಲ್ಲಿ ಕುಂದಾಪುರ ತಾಲೂಕಿನವರ ಕೊಡುಗೆ ಅಪಾರವಾಗಿದೆ.ಸಂಘಟಿತರಾದಾಗ ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡಲು ಸಾಧ್ಯ .ದುಬೈನಲ್ಲಿ ನೆಲೆಸಿರುವ ಕುಂದಾಪುರ ಕನ್ನಡಿಗರು ಒಗ್ಗೂಡುವ ಸಮ್ಮೀಲನ ಕಾರ್ಯಕ್ರಮ ನಮ್ಮೊಳಗಿನ ಭಾಂದವ್ಯ ವೃದ್ದಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅಪ್ಪಣ್ಣ ಹೆಗ್ಡೆ ವಿದೇಶದಲ್ಲಿ ಸಂಘಟಿತರಾಗಿ ಊರಿನ ಅಭಿವೃದ್ದಿಯ ಬಗೆಗೆ ಕಾಳಜಿ ವಹಿಸುವುದು ಶ್ಲಾಘನೀಯವಾದ ಕಾರ್ಯವಾಗಿದೆ.ಕಲೆ, ಸಂಸ್ಕ್ರತಿ, ಸಾಹಿತ್ಯ ಉದ್ಯಮ ಕ್ಷೇತ್ರದಲ್ಲಿ ಕುಂದಾಪುರ ಒಗ್ಗೂಡುವುದರಿಂದ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಅಜಿತ್ ಕುಮಾರ್ ಶೆಟ್ಟಿ ಶಾನಾಡಿ, ಹಾಸ್ಯ ಚಕ್ರವರ್ತಿ ಮನು ಹಂದಾಡಿ,ಸುಧಾಕರ ಅರಾಟೆ, ಗೌರವಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ, ನಮ್ಮ ಕುಂದಾಪ್ರ ಅದ್ಯಕ್ಷ ಸಾಧನ್ ದಾಸ್, ಉದ್ಯಮಿ ಶೀನ ದೇವಾಡಿಗ, ಪ್ರಕಾಶ ನಾಯ್ಕ ಉಪಸ್ಥಿತರಿದ್ದರು.
ಈ ಸಂದಭದಲ್ಲಿ ವರದರಾಜ ಶೆಟ್ಟಿಯವರಿಗೆ ಉದ್ಯಮ ರತ್ನ ಪ್ರಶಸ್ತಿ ಹಾಗೂ ಅಪ್ಪಣ್ಣ ಹೆಗ್ಡೆಯವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ದಿನೇಶ ದೇವಾಡಿಗ ಸ್ವಾಗತಿಸಿದರು. ರೆಡ್.ಎಫ್.ಎಂ.ಖ್ಯಾತಿಯ ಆರ್.ಜೆ.ನಯನಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.