ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಇಲ್ಲಿನ ರಂಗ ಸುರಭಿಯ ಆಶ್ರಯದಲ್ಲಿ ನದೆಯತ್ತಿರುವ 10 ದಿನಗಳ ಚಿಣ್ಣರ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಬೈಂದೂರಿನ ರೋಟರಿ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ನಿವೃತ ವಿಜಯ ಬ್ಯಾಂಕ್ ಅಧಿಕಾರಿ ರೋ. ವಸಂತ ಹೆಗ್ಡೆ ವಹಿಸಿದ್ದು ರಂಗಸುರಭಿಯ ಚಿಣ್ಣರ ರಂಗ ಚಟುವಟಿಕೆಗೆ ಶುಭ ಹಾರೈಸಿದರು. ಸಮಾರೋಪ ನುಡಿಗಳನ್ನಾಡಿದ ರಂಗ ನಿರ್ದೇಶಕ ಡಾ || ಶ್ರೀ ಪಾದ್ ಭಟ್ ರವರು ಪಾಲಕರು ತಮ್ಮ ಮಕ್ಕಳ ಜೀವನವನ್ನು ಮುಮ್ಮುಖವಾನ್ನಾಗಿಸಬೇಕೆ ಹೊರತು ಹಿಮ್ಮುಖವಾಗಿಸಬಾರದು ಎಂದರು. ಮುಖ್ಯ ಅತಿಥಿಯಾಗಿ ರೋಟರಿಯ ಮಾಜಿ ಸಹಾಯಕ ಗವರ್ನರ್ ಜೀವ ವಿಮಾ ಅಧಿಕಾರಿ ರೋ. ಸೋಮನಾಥನ್ ರವರು ಶುಭ ಹಾರೈಸಿದರು. ಶಿಬಿರದ ರಂಗ ನಿರ್ದೇಶಕಿ ಕು || ಅಕ್ಷತಾ ಶಿವಮೊಗ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದು ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿಯವರು ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ. ವೈ. ಕೊರಗ ವಂದಿಸಿ ಸುರಭಿಯ ನಿದೇರ್ಶಕ ಸುಧಾಕರ . ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಂಗಶಿಬಿರದ ಸುಮಾರು 35 ರಿಂದ 40 ಬಾಲಕಲಾವಿದರಿಂದ ಮಕ್ಕಳ ನಾಟಕ ”ಹಂಚಿನ ಮನೆ ಪರಸಪ್ಪ” ಪ್ರದರ್ಶನಗೊಂಡಿತು.