ನಗುತಾ ನಗುತಾ ಬನ್ನಿ..ಖುಷಿ ಖುಷಿಯಲ್ಲಿ ಮತದಾನ ಮಾಡಿ.. ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಕರೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಉತ್ಸವಕ್ಕೆ ಬರುವಂತೆ ಮತದಾನಕ್ಕೆ ಕೇಂದ್ರಕ್ಕೆ ಮತದಾರರು ಬರಬೇಕು. ಜಾತ್ರೆ ಉತ್ಸವ, ಹಬ್ಬ-ಹರಿದಿನಗಳಲ್ಲಿ ಜನ ಹೇಗೆ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಾರೋ ಹಾಗೆ ಮತದಾನದಲ್ಲಿ ಪಾಲ್ಗೊಳ್ಳಬೇಕು. ಸರದಿ ರಹಿತ, ಪಿಂಕ್, ವಿಕಲಚೇತನ, ಯುವ,ಹಿರಿಯ ನಾಗರಿಕ ಮತಗಟ್ಟೆಗಳ ಮೂಲಕ ಮತದಾನ ಶೇ.ಹೆಚ್ಚಳಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ನಗುತಾ ನಗುತಾ ಬನ್ನಿ..ಮತದಾನ ಮಾಡಿ..

Call us

Click Here

…ಹೀಗೆ ಹೇಳಿದವರು ಕುಂದಾಪುರ ಚುನಾವಣೆ ಅಧಿಕಾರಿ ಟಿ.ಭೂಬಾಲನ್.

ಕುಂದಾಪುರ ಮಿನಿ ವಿಧಾನ ಸೌಧ ಎಸಿ ಕೋರ್ಟ್ ಹಾಲ್‌ನಲ್ಲಿ ಶನಿವಾರ ನಡೆದ ಎಲೆಕ್ಟ್ರಾನಿಕ್ ಮತಯಂತ್ರ ಪ್ರಾತ್ಯಕ್ಷಕೆಯಲ್ಲಿ ಮಾತನಾಡಿ, ಕುಂದಾಪುರ ಮಧುಸೂಧನ ಕುಶೆ ಸರ್ಕಾರಿ ಪ್ರೌಢಶಾಲೆ, ಕೋಣಿ ಗ್ರಾಮ ಮೇಲ್ಕಟ್ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಂಕ್ ಮತಘಟ್ಟೆಯಾಗಿದ್ದು, ಸಿಬ್ಬಂದಿಯಿಂದ ಹಿಡಿದು ಪೊಲೀಸ್ ತನಕ ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಮಹಿಳಾ ಮತದಾರರು ಹೆಚ್ಚಿರುವ ನಿಮಿತ್ತ ಈ ಎರಡು ಮತಘಟ್ಟೆ ಪಿಂಕಾಗಿದೆ ಎಂದು ತಿಳಿಸಿದರು.

ವಿಕಲಚೇತನರಿಗೆ ರ‍್ಯಾಂಪ್ ಇರುವ ಮತಘಟ್ಟೆ ತೆರೆಯಲಾಗಿದ್ದು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಮತಘಟ್ಟೆ ಒಂದಿದ್ದು, ಅವರನ್ನು ಕರೆತಂದು ಹಿಂದಕ್ಕೆ ಬಿಡುವ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ವಾಹನ ಸೌಕರ್ಯವಿಲ್ಲದ ಮತಕೇಂದ್ರಗಳಿಗೆ ನಿರ್ಧಷ್ಠ ಸ್ಥಳದಿಂದ ಮತದಾರರ ಕರೆತಂದು ಬಿಡುವ ಜತೆ ಕುದ್ರುಗಳ ವಾಸಿಗಳಿಗೆ ಮತದಾನ ಮಾಡಲು ದೋಣಿ ಹಾಗೂ ಇನ್ನಿತರ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮೂರು ಮಾದರಿ ಮತಘಟ್ಟೆ, ಮೂರು ಯುವ ಮತಘಟ್ಟೆ, ಒಂದು ವಿಕಲಚೇತನ ಮತಘಟ್ಟೆ ಹಾಗೂ ಸರತಿ ಸಾಲುರಹಿತ ಮತಘಟ್ಟೆಗಳು ಇದ್ದು, ಎಲ್ಲಾ ೨೧೫ ಮತಘಟ್ಟೆಗಳಲ್ಲಿ ರ‍್ಯಾಂಪ್, ವಿದ್ಯುತ್, ವೀಲ್‌ಚೇರ್, ಶೌಚಾಲಯದ ವ್ಯವಸ್ಥೆ ಇರುತ್ತದೆ. ವಲ್ನರಬಲ್ ಮತಘಟ್ಟೆಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದ್ದು, ಎಲ್ಲರೂ ನಿರ್ಭೀತರಾಗಿ ಮತದಾನ ಮಾಡಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಲಾಗುತ್ತದೆ ಎಂದು ಹೇಳಿದರು.

Click here

Click here

Click here

Click Here

Call us

Call us

ಕುಂದಾಪುರ ಚುನಾವಣೆ ಸಹಾಯಕ ಅಧಿಕಾರಿ ರವಿ, ಕಂದಾಯ ಇಲಾಖೆ ಆರ್‌ಒ ನರಸಿಂಹ ಕಾಮತ್, ಕಚೇರಿ ಸಿಬ್ಬಂದಿ ಇದ್ದರು.

ಪ್ರಮುಖ ಸಂಗತಿ :
*ಒಟ್ಟು ಮತದಾರರು-1,99,583, ಪುರುಷ-95,935, ಮಹಿಳೆ_1,03,648

*ಮತದಾನ ಕೇಂದ್ರ ಸಂಖ್ಯೆ 215, ಹೆಚ್ಚುವರಿ ಮತಘಟ್ಟೆ 3, ಒಟ್ಟು 218

*ಸೇವಾ ಮತದಾರರು ಪುರುಷರು_41, ಮಹಿಳೆ-1, ಒಟ್ಟು 42

*ಹೊಸ ಸೇರ್ಪಡೆ ಪುರುಷ_1996, ಮಹಿಳೆ_2,165, ಒಟ್ಟು 4,161

*ಕೈಬಿಟ್ಟ ಮತದಾರರು ಪುರುಷ_714,,ಮಹಿಳೆ_925ಒಟ್ಟು 1639

ವಶಕ್ಕೆ ಪಡೆದ ಮಧ್ಯ ಮತ್ತು ಹಣ

ಚುನಾವಣೆ ಘೋಷಣೆ ನಂತರ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ 7,20,310 ಲಕ್ಷ ರೂ ವಶಕ್ಕೆ ಪಡೆಯಲಾಗಿದೆ. ದೂರ ಬಂದ ಹಿನ್ನೆಲೆಯಲ್ಲಿ 9 ಪ್ರಕರಣ ದಾಖಲಾಗಿದ್ದು, 6 ಪ್ರಕರಣ ಎಫ್‌ಐಆರ್ ಮಾಡಲಾಗಿದೆ. ಇದೂವರೆಗೆ ಒಟ್ಟು 1380.785 ಲೀಟರ್ ಮಧ್ಯ, 447.250 ಲೀಟರ್ ಬೀರ್ ವಶಕ್ಕೆ ಪಡೆಯಲಾಗಿದ್ದು, ಲಿಕ್ಕರ್ ಪ್ರಕರಣದಲ್ಲಿ 4 ಘೋರ ಹಾಗೂ 9 ಬಿಎಲ್‌ಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಕೋಟ್ :
ಈ ಬಾರಿ ಚುನಾವಣೆಯಲ್ಲಿ ಸರತಿರಹಿತ ಮತಘಟ್ಟೆ ತೆರೆಯಲಾಗುತ್ತಿದ್ದು, ಮತಘಟ್ಟೆ ಹೊರಗೆ ಮತದಾರರಿಗೆ ಮತದಾನದ ಚೀಟಿ ವಿತರಿಸಿ, ಅವರ ಸರತಿ ಬಂದ ನಂತರ ಮತದಾನ ಮಾಡಬಹುದು. ಅವರಿಗೆ ರೆಸ್ಟ್ ರೂಮ್ ಇದ್ದು, ಅಲ್ಲಿ ನೀರು, ಶೌಚಾಲಯ, ದಿನಪತ್ರಿಕೆ ವ್ಯವಸ್ಥೆ ಮಾಡಲಾಗಿದ್ದು, ಕಡಿಮೆ ಬೆಲೆಯಲ್ಲಿ ಚಾ-ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಸೆಲ್ಫಿ ಪಾಯಿಂಟ್, ಟೆಚ್ ಪ್ಯಾಡ್ ವ್ಯವಸ್ಥೆ ಮಾಡಿದ್ದು, ತೆಗೆದ ಸೆಲ್ಪಿ ಪೋಟೋ ವಾಟ್ಸ್‌ಅಫ್ 9606779366 ಕಳುಹಿಸಿದರೆ, ಆಯ್ಕೆಯಾದ ಪೊಟೋಕ್ಕೆ ಚುನಾವಣೆ ನಂತರ ಬಹುಮಾನ ನೀಡಲಾಗುತ್ತದೆ. ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಸ್ಟ್ರಾಂಗ್ ರೋಮ್‌ನಲ್ಲಿ ಮಸ್ಟರಿಂಗ್ ರೀಮಸ್ಟರಿಂಗ್ ಮಾಡಲಾಗುತ್ತದೆ. ಬೇರೆ ಕಡೆಯಿಂದ ಬರುವ ಮತಘಟ್ಟೆ ಸಿಬ್ಬಂದಿಗೆ ಮೇ.5 ರಂದು ತರಬೇತಿ ನೀಡಲಾಗುತ್ತಿದ್ದು, ಶಾಂತ ಹಾಗೂ ಸಸೂತ್ರ ಮತದಾನಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.

 

Leave a Reply