ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವೆಂಕಟರಮಣ ಪಿಯು ಕಾಲೇಜ್ ಪಿಸಿಎಂಸಿ ವಿದ್ಯಾರ್ಥಿನಿ ಸತ್ಯಶ್ರೀ ರಾವ್ ವಿಜ್ಞಾನ ವಿಭಾಗದಲ್ಲಿ ಒಟ್ಟು 593ಅಂಕ ಪಡೆದ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದು ಉತ್ತೀರ್ಣಳಾಗಿದ್ದಾಳೆ. ಇಂಗ್ಲೀಷ್‌ನಲ್ಲಿ 93 ಅಂಕ ಬಿಟ್ಟರೆ ಉಳಿದಿದ್ದರಲ್ಲಿ ನೂರರ ಸಾಧನೆ. ವಿಶೇಷವೆಂದರೆ ಯಾವ ಶಾಲೆಯಲ್ಲಿ ತಂದೆ ಚಾಲಕರಾಗಿ ದುಡ್ಡಿಯುತ್ತಿದ್ದರೋ ಅದೇ ಶಾಲೆಯಲ್ಲಿ ಕಲಿತ ಮಗಳು ರಾಜ್ಯಕ್ಕೆ ನಾಲ್ಕನೇ ಟಾಪರ್ ಆಗಿದ್ದಾರೆ.
ಕುಂದಾಪುರ ಅಂಕದಕಟ್ಟೆ ನಾಗೇಶ್ ರಾವ್ ಹಾಗೂ ಲಲಿತಾ ಎನ್.ರಾವ್ ಇಬ್ಬರು ಹೆಣ್ಣು ಮಕ್ಕಳಲ್ಲಿ ಸತ್ಯಾಶ್ರೀ ಎರಡನೆಯವಳು. ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಕ ಶೈಲಶ್ರೀ ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಬಿಎಸ್ಸಿ ವಿದ್ಯಾರ್ಥಿನಿ.
ಕುಂದಾಪ್ರ ಡಾಟ್ ಕಾಂಗೆ ಸತ್ಯಾಶ್ರೀ ಪ್ರತಿಯಿಸಿ ದಿನಕ್ಕೆ ಮೂರು ಗಂಟೆ ಓದುತ್ತಿದ್ದು, ಓದಲಿಕ್ಕಾಗಿಯೇ ಸಮಯ ನಿಗಧಿ ಮಾಡಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಕೂಡಾ ಓದುವಂತೆ ಒತ್ತಡ ಹೇರುತ್ತಿರಲಿಲ್ಲ. ಓದಿನೊಟ್ಟಿಗೆ ತ್ರೋ ಬಾಲ್ ಹಾಗೂ ಡಾನ್ಸ್ ಬಗ್ಗೆಯೂ ಗಮನ ಹರಿಸುತ್ತಿದ್ದೆ. ಇನ್ನೂ ಒಂದೆರಡು ಹೆಚ್ಚು ಅಂಕ ನೀರೀಕ್ಷಿಸಿದ್ದು, ಅಂಗ್ಲಾ ಭಾಷೆಯಲ್ಲಿ ನಾನು ಎಣಿಸಿದ್ದಕ್ಕಿಂತ ಕಡಿಮೆ ಬಂತು. ರಿಜಲ್ಟ್ ಖುಷಿ ಕೊಟ್ಟಿದೆ ಎನ್ನುತ್ತಾರೆ.
ಮನದಾಳದ ಮಾತಾದರೆ, ಮಗಳು ಸಾಧನೆ ಬಗ್ಗೆ ಹೆತ್ತವರು ಹೆಚ್ಚಿನ ಸಂಭ್ರಮಪಟ್ಟಿದ್ದು, ಮಗಳಿಗೆ ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡರು.