ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಆರ್.ಎನ್.ಶೆಟ್ಟಿ ಪಿಯು ಕಾಲೇಜ್ ವಿದ್ಯಾರ್ಥಿ ವಿವೇಕ್ ಗಿರಿಧರ ಪೈ ಹೆಚ್. ವಿಜ್ಞಾನ ವಿಭಾಗದಲ್ಲಿ ಒಟ್ಟು 590 ಅಂಕ ಪಡೆದ ಪಾಸಾಗಿದ್ದಾರೆ.
ಮಂಗಳೂರು ಕೆಎಸ್ಸಾಆರ್‌ಟಿಸಿ ಡಿಪೋದಲ್ಲಿ ಅಧಿಕಾರಿಯಾಗಿರುವ ಗಿರಿಧರ ಪೈ ಹೆಚ್. ಹಾಗೂ ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಹೆಚ್‌ಒಡಿ ಹೆಡ್ ಗಾಯತ್ರಿ ಪೈ ಏಕೈಕ ಪುತ್ರ ಗಿರಿಧರ್ ಒಟ್ಟು 595ರಷ್ಟು ಅಂಕ ನೀರೀಕ್ಷಿಸಿದ್ದು, ನಿರೀಕ್ಷಿತ ಅಂಕ ಬಾರದ ಬಗ್ಗೆ ನಿರಾಸೆಯೇನು ಇಲ್ಲ. ಮುಂದೆ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಬೇಕು ಎನ್ನೋದು ನನ್ನ ಗುರು ಎಂದು ವಿಜಯವಾಣಿ ತಿಳಿಸಿದ್ದಾನೆ.
ಓದಿನೊಟ್ಟಿಗೆ ಕ್ರಿಕೆಟ್ ಹಾಗೂ ಫುಟ್‌ಬಾಲ್ ಕ್ರೀಡೆ ಬಗ್ಗೆ ಆಸಕ್ತಿ ಇರುವ ವಿವೇಕ್ ಎಸ್ಸೆಸ್‌ಎಲ್ಸಿಯಲ್ಲಿ ಒಟ್ಟು 622 ಅಂಕ ಪಡೆದು ಉತ್ತೀರ್ಣರಾಗಿದ್ದ. ಮಗನ ಸಾಧನೆ ಬಗ್ಗೆ ತಂದೆ ಗಿರಿಧರ್ ಹಾಗೂ ತಾಯಿ ಗಾಯತ್ರಿ ಅವರಿಗೆ ತೃಪ್ತಿಯಿದ್ದು, ಮುಂದಿನ ಆಯ್ಕೆ ಅವನಿಗೆ ಬಿಟ್ಟಿದ್ದು ಎಂದು ಅವರು ತಿಳಿಸಿದ್ದಾರೆ.