ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಶೇ. 96.6 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 147 ವಿದ್ಯಾರ್ಥಿಗಳ ಪೈಕಿ 142 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 26 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 85 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 22 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 9 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯು.ಚೈತ್ರಾ ಶ್ಯಾನುಭಾಗ್ (588) ಅಂಕ ಗಳಿಸುವ ಮೂಲಕ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ನೇಹಾ (579), ಸುಜನ್ (577), ಮಲಿಕ್ ನಾಯಕ್ (575), ಪ್ರಕಾಶ ಪೈ (568), ಶರತ್ ಎಲ್.ಪಿ.(೫೬೮), ಸುಪ್ರೀತಾ ಜಿ. (567), ಟಿ.ಅಶ್ಮಿತಾ ಶೆಣೈ (566), ಮನಿಲಾ (561), ಹೃತಿಕ್ (559), ಎಚ್.ಮಹಮ್ಮದ್ ಶಾದಾಬ್ (556), ಸಂಜಯ್ ಖಾರ್ವಿ (553), ನಿಖಿಲ್ ಖಾರ್ವಿ (547), ಧನುಶ್ರೀ (546), ಪ್ರೀತಿ ಖಾರ್ವಿ (539), ಮನೋಜ್ ಖಾರ್ವಿ (539) ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.










