ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಆರೋಗ್ಯಕರ ಮನಸ್ಸು: ವಾಸುದೇವ ಗಂಗೇರಾ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಮಾಜದ ಸಂಪನ್ನವರ್ಗ ತಮ್ಮ ಮಕ್ಕಳನ್ನು ನಾಟಕರಂಗದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಸಕಾರಾತ್ಮಕವಾಗಿ ಸ್ಪಂದಿಸದ ಸಮಯವೊಂದಿತ್ತು. ಆದರೆ ಈಗ ಬದುಕು ನಿಂತ ನೀರಾಗದೇ ಮನಸ್ಸಿಗೆ ಮುದಕೊಡುವ ಹವ್ಯಾಸಗಳು ಬೇಕೆಂಬ ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ನಾಟಕ ತರಬೇತಿ ಶಿಬಿರಗಳಿಗೆ ಕಳುಹಿಸಲು ಮುಂದಾಗಿದ್ದಾರೆ ಎಂದು ರಂಗಾಯಣ ಹಾಗೂ ನೀನಾಸಂ ಪದವೀಧರ ವಾಸುದೇವ ಗಂಗೇರಾ ಹೇಳಿದರು.

Call us

Click Here

ಶ್ರೀ ಶಾರದಾ ವೇದಿಕೆಯಲ್ಲಿ ಬೈಂದೂರು ಲಾವಣ್ಯ ಆಶ್ರಯದಲ್ಲಿ ನಡೆದ 21 ನೇ ವರ್ಷದ ಮಕ್ಕಳ ಬೇಸಿಗೆ ನಾಟಕ ರಂಗತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಪಂಚದಲ್ಲಿ ವಿಭಿನ್ನ ಸ್ತರಗಳ ಬದುಕಿನ ಓಟದ ನಡುವೆ ಮಕ್ಕಳು ಬಾಂದವ್ಯ, ಕುಟುಂಬ, ಪರಿಸರ ಪ್ರಜ್ಞೆಯಿಲ್ಲದೇ ಕಳೆದುಹೋಗುತ್ತಿದ್ದಾರೆ. ಇದನ್ನು ತಡೆಗಟ್ಟುವ ಮೂಲಕ ಮಕ್ಕಳ ಬಾಲ್ಯವನ್ನು ಅವರು ಆನಂದಿಸಬೇಕೆಂಬ ಕಲ್ಪನೆಯಿಂದ ಹೆತ್ತವರು ಹೆಚ್ಚಿನ ಸಹಕಾರ ನೀಡಿ ಮಕ್ಕಳನ್ನು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆರೋಗ್ಯಕರ ಮನಸ್ಸಿದ್ದರೆ ಶರೀರ ಸ್ವಾಸ್ಥ್ಯವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ರಂಗಭೂಮಿಯ ಪ್ರತಿಭೆಯ ಉದ್ದೀಪನ ನಿಸ್ಸಂಶಯವಾಗಿ ಜೀವನದ ಇತರ ಕ್ಷೇತ್ರಗಳಲ್ಲಿ ಸಹಕಾರಿಯಾಗಬಲ್ಲದು ಎಂಬ ಸಂದೇಶವನ್ನು ಹಿರಿಯರಿಗೆ, ಮಹಿಳೆಯರಿಗೆ ತಲುಪಿಸುವಲ್ಲಿ ರಂಗಮನೆಗಳು ಬಹಳಷ್ಟು ಯಶಸ್ಸು ಕಂಡಿದ್ದು, ಇದರಿಂದಾಗಿಯೇ ಕಲಾಸಕ್ತರು ರಂಗಭೂಮಿಯತ್ತ ಹೆಚ್ಚೆಚ್ಚು ಆಕರ್ಷಿತರಾದರು ಎಂದವರು ಅಭಿಪ್ರಾಯಪಟ್ಟರು.

ಲಾವಣ್ಯ ಅಧ್ಯಕ್ಷ ಗಿರೀಶ್ ಬೈಂದೂರು ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಮಾಜಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಸ್ಥಾಪಕ ಸದಸ್ಯರಾದ ಉಮೇಶ್ ಕುಮಾರ್, ಅನಿಲ್ ಶ್ಯಾನುಭಾಗ್ ಉಪಸ್ಥಿತರಿದ್ದರು. ನಾಗರಾಜ ಯಡ್ತರೆ ಸ್ವಾಗತಿಸಿ, ಕಾರ್ಯದರ್ಶಿ ಬಿ. ಮೋಹನ್ ಕಾರಂತ್ ವಂದಿಸಿದರು. ವ್ಯವಸ್ಥಾಪಕ ಗಣಪತಿ ಎಸ್. ನಿರೂಪಿಸಿದರು. ನಂತರ ಶಿಬಿರದ ಒಟ್ಟು 45 ವಿದ್ಯಾರ್ಥಿಗಳಿಂದ ಚುಟುಕು ಕವಿ ದುಂಡಿರಾಜ್ ಅವರ ‘ಆಧ್ವಾನಪುರ’ ನಾಟಕ ಯಶಸ್ವೀಯಾಗಿ ಪ್ರದರ್ಶನಗೊಂಡಿತು.

 

Click here

Click here

Click here

Click Here

Call us

Call us

 

 

Leave a Reply