ಶಿಕ್ಷಣ ವ್ಯವಸ್ಥೆಯ ಮರುವ್ಯಾಖ್ಯಾನ ಇಂದಿನ ಅಗತ್ಯ : ಡಾ. ದಿನೇಶ್ ಸಿಂಗ್

Click Here

Call us

Call us

Call us

ಕುಂದಾಪ್ರ ಡಾಟ್ ಕಂ ಸುದ್ದಿ
ಮೂಡುಬಿದಿರೆ: `ನಮಗೆ ನಮ್ಮದೇ ಆದ ಒಂದು ಅಂತರ್‌ಧ್ವನಿಯಿರುತ್ತದೆ. ಆ ಅಂತರ್‌ಧ್ವನಿಯನ್ನು ಅರಿತುಕೊಂಡು ಅದರಂತೆ ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ನಿಜವಾದ ಯಶಸ್ಸು, ಉನ್ನತಿ ದೊರೆಯಲು ಸಾಧ್ಯ. ಶ್ರೀನಿವಾಸ ರಾಮಾನುಜಂ, ಸಚಿನ್ ತೆಂಡೂಲ್ಕರ್, ಸಂತ ಕಬೀರರು ಮಹಾನ್ ಸಾಧಕರಾಗಿದ್ದು ತಮ್ಮ ಆಂತರ್ಯದ ಧ್ವನಿಯನ್ನು ಗುರುತಿಸಿಕೊಂಡಾಗಲೇ. ನಮ್ಮ ಶೈಕ್ಷಣಿಕ ವ್ಯವಸ್ಥೆಯು ತನ್ನ ಸೀಮಿತ ಚೌಕಟ್ಟನ್ನು ದಾಟಿ ವಿಸ್ತಾರವಾದ ಹರವಿಗೆ ತೆರೆದುಕೊಂಡಾಗ ಮಾತ್ರ ಶಿಕ್ಷಣದ ನಿಜ ಉದ್ದೇಶ ಸಾಧನೆಯಾಗುತ್ತದೆ’ ಎಂದು ಗಣಿತಜ್ಞ, ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ದಿನೇಶ್ ಸಿಂಗ್ ಹೇಳಿದರು.

Call us

Click Here

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಅಡಿ ಆಯೋಜನೆಗೊಂಡ `ರೀ-ಡಿಫೈನಿಂಗ್ ಏಜ್ಯಕೇಶನ್ ಟು ಎನೇಬಲ್ ದ ಯಂಗ್’ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಸೃಜನಾತ್ಮಕ ಸಾಮಥ್ರ್ಯ ಹೆಚ್ಚಿದಾಗ ಮಾತ್ರ ಸಮಾಜ, ದೇಶ ಉನ್ನತಿಯನ್ನು ಕಾಣಲು ಸಾಧ್ಯ; ಆದ್ದರಿಂದ ಶಿಕ್ಷಣ ವ್ಯವಸ್ಥೆಯು ಪಠ್ಯ ಕೇಂದ್ರಿತ ಹಾಗೂ ಕಪ್ಪು ಹಲಗೆ ಶಿಕ್ಷಣದಿಂದ ಹೊರ ಬಂದು ವಿದ್ಯಾರ್ಥಿಗಳ ಕ್ರಿಯಾತ್ಮಕತೆ, ಆಸಕ್ತಿಗಳನ್ನು ಪೋಷಿಸುವ ಕೆಲಸ ಮಾಡಬೇಕಿದೆ. ರವೀಂದ್ರನಾಥ ಟ್ಯಾಗೋರರ `ಶಾಂತಿನಿಕೇತನ’ ಬೋಧಿಸಿದ್ದು ಇದನ್ನೇ; ಮಹಾತ್ಮ ಗಾಂಧೀಜಿಯವರು ಹೇಳಿದ್ದೂ ಇದನ್ನೇ. ಇನ್ನು ವಿದ್ಯಾರ್ಥಿಗಳು ಕೇವಲ ಉದ್ಯೋಗಾಕಾಂಕ್ಷಿಗಳಾಗಿ ಉಳಿಯದೇ ಉದ್ಯೋಗದಾತರಾಗಿ ಬೆಳೆಯುವತ್ತ ಗಮನ ಹರಿಸಬೇಕಿದೆ. ಇದಕ್ಕಾಗಿ ಇಂದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರುವ್ಯಾಖ್ಯಾನಿಸುವುದು ತುಂಬಾ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡ ಡಾ. ದಿನೇಶ್ ಸಿಂಗ್, ದೊಡ್ಡ ದೊಡ್ಡ ಆವಿಷ್ಕಾರಗಳಾಗುವುದು ಸಣ್ಣ ಸಣ್ಣ ಸಾಮಾಜಿಕ ಅಗತ್ಯತೆಗಳಿಂದಲೇ. ಆದ್ದರಿಂದ ಯುವಜನತೆ ವಿಜ್ಞಾನ ಪ್ರಯೋಗಗಳ ಬಗ್ಗೆ ಪುಸ್ತಕಗಳಲ್ಲಿ ಓದುವುದಕ್ಕಿಂತ ನಮ್ಮ ನಿತ್ಯ ಜೀವನದ ಅಗತ್ಯತೆಗಳ ಬಗ್ಗೆ ಅರಿಯುವ ಪ್ರಯತ್ನ ಮಾಡಬೇಕು. ಗಣಿತ ಹಾಗೂ ವಿಜ್ಞಾನ ಕ್ಷೇತ್ರದ ಮಹತ್ವದ ಸಂಶೋಧನೆಗಳು, ಪ್ರಮೇಯಗಳು ರೂಪುಗೊಂಡಿದ್ದು ಸಾಮಾನ್ಯ ಜೀವನದ ಆಧಾರದ ಮೇಲೆಯೇ. ಭಾರತ ದೇಶವು ಇಂತಹ ಅದ್ಭುತ ಆವಿಷ್ಕಾರಗಳಿಗೆ ತಾಯಿಯಾಗಿದ್ದು, ಜಗತ್ತಿನ ಇತರ ದೇಶಗಳಿಗೆ ಜ್ಞಾನದ ಸೆಲೆಯಾಗಿತ್ತು ಎಂದರು. ಇದಕ್ಕೆ ಪೂರಕವಾಗಿ ಇತಿಹಾಸದ ಹಲವು ಉದಾಹರಣೆಗಳನ್ನು ನೀಡಿದ ಅವರು ಬೋಧಾಯನ, ಭಾಸ್ಕರಾಚಾರ್ಯ, ಪಿಂಗಳ, ಪಾಣಿನಿ, ಸುಶ್ರುತರಂತಹ ಭಾರತೀಯ ತಜ್ಞರು ಸಾವಿರಾರು ವರ್ಷಗಳ ಹಿಂದೆಯೇ ಅಪೂರ್ವ ಪ್ರಯೋಗಗಳನ್ನು ಮಾಡಿದ್ದು, ಪಾಶ್ಚಾತ್ಯ ಜಗತ್ತು ಅವರು ನೀಡಿದ ಜ್ಞಾನದ ಆಧಾರದಲ್ಲಿಯೇ ಮುನ್ನಡೆಯುತ್ತಿದೆ. ಇನ್ನು ಖಗೋಳ ವಿಜ್ಞಾನ, ಪೈಥಾಗೋರಸ್ ಪ್ರಮೇಯ ಹಾಗೂ ಮೆಟಲರ್ಜಿಯಂತಹ ರಾಸಾಯನಿಕ ಪ್ರಕ್ರಿಯೆಗಳು ವೇದಗಳ ಕಾಲದಿಂದಲೇ ಭಾರತದಲ್ಲಿ ಬಳಕೆಯಲ್ಲಿದ್ದವು ಎಂದು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಡಾ. ದಿನೇಶ್ ಸಿಂಗ್ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ವಸಾಹತುಶಾಹಿ ಪದ್ಧತಿ ಭಾರತದ ವಿಜ್ಞಾನ ಕ್ಷೇತ್ರದ ಮೇಲೆ ಬೀರಿದ ದುಷ್ಪರಿಣಾಮ, ಪ್ರಾಯೋಗಿಕ ಕಲಿಕೆ, ಔದ್ಯೋಗಿಕ ಶಿಕ್ಷಣ, ಮೀಸಲಾತಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಕಡ್ಡಾಯ ಹಾಜರಾತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡೆಸ್ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

 

Leave a Reply