ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ

Call us

Call us

Call us

ಗಂಗೊಳ್ಳಿ: ಮಾನವಜನ್ಮವನ್ನು ಸತ್ಕರ್ಮಗಳಿಗೆ ಬಳಸಿಕೊಳ್ಳ ಬೇಕು. ನಿರಂತರ ದೇವರ ಅರ್ಚನೆ, ಪೂಜೆ, ಉಪಾಸನೆಗಳನ್ನು ನಿಷ್ಠೆ, ಭಕ್ತಿಯಿಂದ ಮಾಡಬೇಕು. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ ಪ್ರೇಮ, ಆದರ ಜಾಗೃತ ಗೊಳ್ಳಲು, ಸಮಾಜದಲ್ಲಿ ಸಂಘಟನ ಶಕ್ತಿ ಕೇಂದ್ರೀಕೃತಗೊಳ್ಳಲು ದೇಗುಲ ಗಳು ಸಹಕಾರಿ. ದೇವಸ್ಥಾನಗಳ ಮೂಲಕ ಉತ್ತಮ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದಾನ, ಸೇವಾ ಮನೋಭಾವದಿಂದ ಸಮಾಜ ಅಭಿವೃದ್ಧಿಯಾಗುತ್ತದೆ, ತ್ಯಾಗದಿಂದ ಸಮಾಜದಲ್ಲಿ ವಿಫುಲತೆ, ವಿಶಾಲತೆದೊರೆಯುತ್ತದೆ. ನಿನಾದ ಸಂಸ್ಥೆ ವತಿಯಿಂದ ನಡೆಸಲಾದ ಕಾರ್ಯ ಕ್ರಮಗಳು ಅಭಿಮಾನ ಪೂರ್ವಕ ವಾದುದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್‌ ವಿದ್ಯಾರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

Call us

Click Here

ಅವರು ಗಂಗೊಳ್ಳಿಯ ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀಮತ್‌ ಸುಧೀಂದ್ರ ತೀರ್ಥ ಸಭಾ ವೇದಿಕೆಯಲ್ಲಿ ಜರಗಿದ ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಆಶೀರ್ವಚನ ನೀಡಿದ ಶ್ರೀ ಕೈವಲ್ಯ ಮಠಾಧೀಶ‌ ಶ್ರೀಮತ್‌ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿ, ಕಲಿಯುಗದಲ್ಲಿ ಮನಪೂರ್ವಕವಾಗಿ ಭಗವಂತನ ನಾಮಸ್ಮರಣೆ, ಉಪಾಸನೆ ಮಾಡಬೇಕು.ಮನಃಪೂರ್ವಕವಾಗಿ ದೃಢ ನಿಶ್ಚಯದಿಂದ ಮಾಡಿದ ಉಪಾಸನೆ ನಾಮಸ್ಮರಣೆಗಳು ಸಿದ್ಧಿಯಾಗಿ ಜೀವನ ಪಾವನಗೊಳ್ಳುತ್ತದೆ ಎಂದರು.

ಇದೇ ಸಂದರ್ಭ ಎಚ್‌. ಗಣೇಶ ಕಾಮತ್‌ ಅವರನ್ನು ಸಮ್ಮಾ¾ನಿಸ ಲಾಯಿತು. ವಿವಿಧ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿದ ಎನ್‌. ಕೃಷ್ಣಾನಂದ ನಾಯಕ್‌ ಗಂಗೊಳ್ಳಿ, ಬಿ. ಉಮಾ ಎಸ್‌. ಶೆಣೈ ಗಂಗೊಳ್ಳಿ ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು, ನಿನಾದ ಸಂಸ್ಥೆಯ ಅಭಿವೃದ್ಧಿಗೆ ಕಾರಣೀಭೂತರಾದ ಎಂ. ಮುಕುಂದ ಪೈ, ಜಿ. ಸುದರ್ಶನ ವಿ. ಆಚಾರ್ಯ ಮತ್ತು ಎಂ. ನಾಗೇಂದ್ರ ಪೈ ಅವರನ್ನು ಉಭಯ ಸ್ವಾಮೀಜಿಯವರು ಅಭಿನಂದಿಸಿ ಹರಸಿದರು.

ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬೈಲೂರು ಮಂಜುನಾಥ ಶೆಣೈ, ವೆಂಕಟೇಶ ನಾಯಕ್‌, ಪೇಟೆ ಶ್ರೀ ವಿಠಲ ರಖುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಕಾಶೀನಾಥ ಪೈ, ಶ್ರೀ ಜಗದಾಂಬ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿಜಿ. ಅನಂತಕೃಷ್ಣ ಭಟ್‌, ಮೇಲ್‌ಗ‌ಂಗೊಳ್ಳಿ ರಾಮಪೈ ಮಠದ ಎಂ. ವಿನೋದ ಪೈ, ಜಿ. ರಮೇಶಶೆಣೈ ಮುಂಬೈ, ಉದ್ಯಮಿ ಪುತ್ತು ಹನುಮಂತ ಪೈ ಭಟ್ಕಳ, ಗಂಗೊಳ್ಳಿ ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಡಿ. ನಾಯಕ್‌, ವೇದಮೂರ್ತಿ ಜಿ. ವೇದವ್ಯಾಸ ಕೆ.ಆಚಾರ್ಯ, ಮಲ್ಯರಮಠ ದೇಗುಲದ ಪ್ರಧಾನ ಅರ್ಚಕ ವೇದಮೂರ್ತಿ ಎಸ್‌. ವೆಂಕಟರಮಣ ಆಚಾರ್ಯ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ನಿನಾದ ಸಂಸ್ಥೆಯ ದಶಮಾನೋತ್ಸವ ಸಮಿತಿ ಅಧ್ಯಕ್ಷ ಜಿ. ರೋಹಿದಾಸ ನಾಯಕ್‌ ಸ್ವಾಗತಿಸಿ, ಸಂಸ್ಥೆಯ ಅಧ್ಯಕ್ಷ ಎಂ. ಮುಕುಂದ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುದರ್ಶನ ವಿ. ಆಚಾರ್ಯ ವರದಿ ವಾಚಿಸಿದರು. ಜಿ. ಗಣೇಶ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

Leave a Reply