ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗೋಕರ್ಣ ವಿದ್ಯಾಧಿರಾಜ ಸ್ವಾಮೀಜಿ ಭೇಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥವಡೇರ ಸ್ವಾಮೀಜಿ ಭೇಟಿ ನೀಡಿದರು.

Call us

Click Here

ದೇವಸ್ಥಾನದಲ್ಲಿ ನಡೆಯುತ್ತಿರುವ ವಾಸ್ತು ವಿಸ್ತಾರ ಕಾರ್ಯವನ್ನು ವೀಕ್ಷಿಸಿ ಆಶೀರ್ವಚನ ನೀಡಿದ ಶ್ರೀಮದ್ ವಿದ್ಯಾಧಿರಾಜ ತೀರ್ಥವಡೇರ ಸ್ವಾಮೀಜಿಯವರು ದೇವರ ಅನುಗ್ರಹದಿಂದ ಉತ್ತಮ ಕಾರ್ಯಗಳು ಸಂಪನ್ನಗೊಳ್ಳಲು ಸಾಧ್ಯವಿದೆ. ದೇವತಾರಾಧನೆಯಿಂದ ಜೀವನದಲ್ಲಿ ಸುಖ ಶಾಂತಿ ದೊರೆತು ಜೀವನ ಪಾವನಗೊಳ್ಳುತ್ತದೆ. ಕಲಿಯುಗದ ದೇವರಾದ ಶ್ರೀ ವೆಂಕಟರಮಣನ ಪೂಜನೆ, ಆರಾಧನೆಯಿಂದ ಕಷ್ಟದುರಿತಗಳೆಲ್ಲವೂ ದೂರವಾಗಿ ಸಕಲಾಭಿಷ್ಟಗಳು ನೆರವೇರುತ್ತದೆ ಎಂದು ಹೇಳಿದರು.

350 ವರ್ಷ ಇತಿಹಾಸವುಳ್ಳ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಕಾಲಕ್ಕೆ ಅಭಿವೃದ್ಧಿ ಕಾರ್ಯಗಳು ನಡೆದು ವಾಸ್ತುವಿನ್ಯಾಸ ವಿಸ್ತಾರಗೊಂಡಿದೆ. ಇದೀಗ ದೇವಳದ ಅಭಿವೃದ್ಧಿ ಹಾಗೂ ಸಮಾಜದ ಭಕ್ತರ ಇಚ್ಛೆಯಂತೆ ಸುಸಜ್ಜಿತ ಸಭಾಂಗಣ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಸದ್ಭಕ್ತರು ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ನಿಗದಿತ ಅವಧಿಯಲ್ಲಿ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಸಮಾಜಬಾಂಧವರು ಈ ಸತ್ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು.

ದೇವಳದ ಆಡಳಿತ ಮಂಡಳಿ ಸದಸ್ಯ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾದ ಎಚ್.ಗಣೇಶ ಕಾಮತ್, ಜಿ.ವೆಂಕಟೇಶ ನಾಯಕ್, ಎನ್.ಕೃಷ್ಣಾನಂದ ನಾಯಕ್, ಡಾ.ಕಾಶೀನಾಥ ಪೈ, ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ಜಿಎಸ್‌ಬಿ ಸಮಾಜ ಬಾಂಧವರು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್ ಸ್ವಾಗತಿಸಿದರು.

Click here

Click here

Click here

Click Here

Call us

Call us

 

Leave a Reply