ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಗೋಳಿಹೊಳೆ ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಚುನಾವಣೆಯ ಕುರಿತು ಜ್ಞಾನಾನುಭವ ನೀಡುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಯಿತು.
ಶಾಲೆಯ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕನ ಆಯ್ಕೆಯನ್ನು ವಿಧಾನಸಭಾ ಚುನಾವಣಾ ಮಾದರಿಯಂತೆ ನಡೆಸಲಾಯಿತು. ಎಂಟು ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎರಡು ದಿನ ಶಾಲೆಯಲ್ಲಿ ಪ್ರಚಾರವನ್ನು ಕೈಗೊಂಡರು. ಎರಡು ಮತಕೇಂದ್ರಗಳಲ್ಲಿ ಶಾಲಾ ಗುರುತಿನ ಚೀಟಿಯೊಂದಿಗೆ ಬಂದು ತಮ್ಮ ಆಯ್ಕೆಯ ನಾಯಕ, ಉಪನಾಯಕನಿಗೆ ಮತನೀಡಿದರು. ನಂತರ ನಡೆದ ಮತ ಎಣಿಕೆಯಲ್ಲಿ ನಾಯಕನಾಗಿ ಸುಚಿ ಶೆಟ್ಟಿ, ಉಪನಾಯಕನಾಗಿ ಅಭೀಷ್ ಮೊಗವೀರ ಆಯ್ಕೆಯಾದರು.
ಪ್ರಾಂಶುಪಾಲ ಚೇತನ್ ಕೆ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಶಿಕ್ಷಕರು ಸಹಕರಿಸಿದರು.