ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಮಾದಕ ವ್ಯಸನ ಜಾಗೃತಿ ಅಭಿಮಾನದ ಭಾಗವಾಗಿ, ಕುಂದಾಪುರ ಪೊಲೀಸ್ ಠಾಣೆ ನೇತೃತ್ವದಲ್ಲಿ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಡೇರಹೋಬಳಿಯಲ್ಲಿ ಮಾದಕದೃವ್ಯ ವಿರುದ್ಧ ಜಾಗೃತಿ ಹಾಗೂ ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಕೀಲರಾದ ರಾಘವೇಂದ್ರ ಚರಣ್ ನಾವುಡರವರು ಮಾತನಾಡುತ್ತಾ, ಭಾರತದ ಯುವಕರೇ ಬಹು ಸಂಖ್ಯಾತರಾಗಿರುವ ದೇಶ. ನಮ್ಮ ದೇಶದಲ್ಲಿ ಆಂತರಿಕ ದಾಳಿಗಿಂತಲೂ ಮಾದಕ ವ್ಯಸನದ ದಾಳಿಯನ್ನು ತಡೆಗಟ್ಟಬೇಕಾಗಿದೆ. ವಿದ್ಯಾರ್ಥಿಗಳು ಯಾವುದೇ ಚಟಗಳ ದಾಸರಾಗದೇ ಉತ್ತಮ ಪ್ರಜೆಯಾಗಿ ಬಾಳಬೆಕೇಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಂದೆ ನಿಮ್ಮ ಜೀವನದಲ್ಲಿ ಯಾವತ್ತು ಮಾದಕದೃವ್ಯ ವ್ಯಸನಗಳಿಗೆ ದಾಸರಾಗ ಬಾರದೆಂದು ಕರೆನೀಡಿದರು. ಅಪರಾಧಗಳನ್ನು ತಡೆಗಟ್ಟಲು ಮಾದಕ ದ್ರವ್ಯಗಳ ವಿರುದ್ಧ ಅರಿವು ಮೂಡಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ಯುವಜನತೆ ಉತ್ತಮ ಗುಣ ನಡತೆಯನ್ನು ಹೊಂದಬೇಕೆಂದು ಈ ಸಂದರ್ಭದಲ್ಲಿ ನುಡಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕ ಶಂಕರವರು ಸ್ವಾಗತಿಸಿದರು. ಕುಂದಾಪುರ ಸಿಟಿ ಜೆಸಿಸಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿರವರು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪದವಿ ಮುಖ್ಯೋಪಧ್ಯಾಯ ಸುಧಾಕರ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಕುಂದಾಪುರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಮಂಜುನಾಥ ಅವರು ಮಾದಕ ದೃವ್ಯದ ದುಷ್ಪರಿಣಾಮದ ಕುರಿತು ಮಾತನಾಡಿದರು. ವಿದ್ಯಾರ್ಥಿ ಭೀಮ್‌ಸೇನ್ ವಂದಿಸಿದರು.
ಈ ಸಂದರ್ಭದಲ್ಲಿ ಮಾಧಕ ದೃವ್ಯದಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲು ವಿಡಿಯೋ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವೃಂದದವರು ಹಾಜರಿದ್ದರು.