ಸುದ್ದಿಮನೆ ದಶಮ ಸಂಭ್ರಮ : ಮಾತೃಪಿತೃ ವಂದನಾ ಅಭಿಯಾನಕ್ಕೆ ಚಾಲನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಂದೆ ತಾಯಿ ಹಾಗೂ ಮಕ್ಕಳದ್ದು ಬಿಡಿಸಲಾಗದ ಭಾವನಾತ್ಮಕ ಸಂಬಂಧ. ಮಕ್ಕಳಿಗೆ ಸಂಸ್ಕಾರ ಕೊಡುವುದು ಮುಖ್ಯವಾದದ್ದು. ತಂದೆ ತಾಯಿಯರನ್ನೇ ಮಕ್ಕಳು ಅನುಸರಿಸುತ್ತಾರೆ. ನಮ್ಮ ಆಚರಣೆಗಳು ಉತ್ತಮವಾದಷ್ಟು ಮಕ್ಕಳು ಉತ್ತಮ ಸಂಸ್ಕಾರ ಹೊಂದುತ್ತಾರೆ ಆದುದರಿಂದ ತಂದೆ ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಸರಿಯಾದ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಮರೆಯಬಾರದು ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಹೇಳಿದರು.

Call us

Click Here

ಅವರು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದಲ್ಲಿ ನ. 8ರಂದು ಸುದ್ದಿಮನೆ ವಾರಪತ್ರಿಕೆ ದಶಮ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಮಾತೃಪಿತೃ ವಂದನಾ ಅಭಿಯಾನ 2018-19ಕ್ಕೆ ಚಾಲನೆ ನೀಡಿ ಆಶಿರ್ವಚನವಿತ್ತರು.

ನಮ್ಮ ಪೂರ್ವಜರು ಸಮಾಜಕ್ಕೆ ಹಲವಾರು ಬಗೆಯ ಆಚರಣೆಗಳನ್ನು ನೀಡಿ ಹೋಗಿದ್ದಾರೆ. ಅದರಲ್ಲಿ ಈಗಿನ ದಿನಮಾನಕ್ಕೆ ಯಾವುದು ಅಗತ್ಯ ಎಂಬುದನ್ನು ವಿವೇಕಯುವಾದ ಚಿಂತನೆಯ ಮೂಲಕ ಅರಿತು ಬೆಳಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಅಳಿಲು ಸೇವೆ ಸಲ್ಲಿಸೋಣ, ಮಾತೃಪಿತೃ ಋಣ ಎಲ್ಲರ ಮೇಲಿದೆ ಎಂಬುವುದನ್ನು ಮರೆಯದಿರೋಣ ಎಂದುಕಿವಿ ಮಾತು ಹೇಳಿದರು.

ಅಭಿಯಾನದ ಅಧ್ಯಕ್ಷರಾದ ಎನ್. ಮೋಹನ್‌ಆಚಾರ್ಯ, ಗೌರವ ಮಾರ್ಗದರ್ಶಿಕರಾದ ವೈ.ಎನ್ ವೆಂಕಟೇಶಮೂರ್ತಿ ಭಟ್ಟ, ಕೇಶವ ಪೈ.ಗಂಗೊಳ್ಳಿ, ಕಾರ್ಯದರ್ಶಿ ರವಿಕುಮಾರ್ ಗಂಗೊಳ್ಳಿ, ಗುರುಗಳಿಗೆ ಗೌರವಾರ್ಪಣೆ ಸಲ್ಲಿಸಿದರು. ಗೌರವ ಮಾರ್ಗದರ್ಶಕರಾದ ಶಶಿಕಲಾ ಬಿಜೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಂಭು ಶೆಟ್ಟಿ, ಸುದ್ದಿಮನೆ ಕಾರ್ಯನಿರ್ವಾಹಕ ಸಂಪಾದಕ ಸುನಿಲ್ ಬೈಂದೂರು ಇನ್ನಿತರರು ಉಪಸ್ಥಿತರಿದ್ದರು.

ಅಭಿಯಾನದ ಸಂಚಾಲಕ ಸಂತೋಷ ಕೋಣಿ ಧನ್ಯವಾದಗೈದರು. ಮಂಜುನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Click Here

Call us

Call us

 

Leave a Reply