ನುಡಿಸಿರಿ ಯೋಚಿಸಿದ ಪರಿಕಲ್ಪನೆಗಳು ಪ್ರಸ್ತುತ ಬಿಕ್ಕಟ್ಟುಗಳಿಗೆ ಉತ್ತರ ರೂಪದಲ್ಲಿವೆ : ಮಲ್ಲಿಕಾ ಘಂಟಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಬಹುರೂಪಿಗೆ ಇರುವ ಅಂತಃಶಕ್ತಿ ಏಕರೂಪತ್ವಕ್ಕೆ ಇರಲು ಸಾಧ್ಯವಿಲ್ಲ. ಆದರೆ ಇಂದು ಏಕರೂಪಿ ಸಂಸ್ಕೃತಿ ಭಾಷೆಯೆಡೆಗೆ ನಮ್ಮನ್ನು ಕೊಂಡೊಯ್ಯುಲಾಗುತ್ತದೆ. ಇದೊಂದು ಅನಾರೋಗ್ಯಕರ ಬೆಳವಣಿಗೆಯಾಗಿದೆ. ಈ ದೃಷ್ಠಿಯಿಂದ ನುಡಿಸಿರಿ ಯೋಚಿಸಿದ ಪರಿಕಲ್ಪನೆಗಳು ಪ್ರಸ್ತುತ ಬಿಕ್ಕಟ್ಟುಗಳಿಗೆ ಉತ್ತರ ರೂಪದಲ್ಲಿವೆ ಎಂದು ೧೫ನೆ ಆಳ್ವಾಸ್ ನುಡಿಸಿರಿ ೨೦೧೮ರ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.
ಅವರು ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೮ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಬುದ್ಧ ಹೇಳುವಂತೆ ಜಗತ್ತಿನಲ್ಲಿ ಸ್ಥೂಲ- ಸೂಕ್ಷ್ಮ ವಸ್ತುಗಳನ್ನೊಳಗೊಂಂಡತೆ ಎಲ್ಲವೂ ನಾಶವಾಗುತ್ತದೆ. ಹೀಗಾಗಿ ಇಲ್ಲಿ ಯಾವುದೂ ಶಾಶ್ವತವಲ್ಲ. ಕ್ಷಣಕ್ಷಣಕ್ಕೂ ಪ್ರತಿಯೊಂದು ಕಣಕಣವೂ ಅಮೂಲಾಗ್ರವಾದ ಬದಲಾವಣೆಗಳನ್ನು ಹೊಂದುತ್ತಲೇ ಇರುತ್ತದೆ. ಬೆಳಕನ್ನು ಕುರಿತು ಚರ್ಚೆ ಮಾಡುವುದರ ಬದಲು ಬೆಳಕನ್ನು ಕಾಪಾಡಿಕೊಳ್ಳುವುದು ಮುಖ್ಯ ಈ ದಾರಿಯಲ್ಲಿಯೇ ನಾವು ಭಾರತವನ್ನು, ಕರ್ನಾಟಕವನ್ನು ದರ್ಶಿಸಬೇಕಾಗಿದೆ ಎಂದರು.
ದರ್ಶನ ಎನುವುದು ಸಿದ್ದ ಮಾದರಿಯದ್ದಲ್ಲ ಅದನ್ನು ಪ್ರಯತ್ನದ ಮೂಲಕವೇ ದರ್ಶಿಸಬೇಕಾಗಿದೆ. ಆ ಪ್ರಯತ್ನದ ಹಿಂದೆ ಇರುವ ಕನಸೇ ಸಮಾನತೆ. ಅದು ಬುದ್ಧ, ಬಸವಾದಿ ಶರಣ ಶರಣೆಯರು, ದಾಸರು ತತ್ವಪದಕಾರರು ಕಂಡ ದರ್ಶನದ್ದು. ಇಂತಹ ಸಮಾನತೆಯ ಬೀಜಗಳನ್ನು ನಮ್ಮ ಸಾಹಿತ್ಯ, ಆಧ್ಯಾತ್ಮಿಕ, ಜಾನಪದ ಪರಂಪರೆ, ಭಾಷೆಯ ವೈವಿಧ್ಯಮಯತೆಯಿಂದ ಗುರುತಿಸಬಹುದಾಗಿದೆ.
ಬ್ರಾಹ್ಮಣ, ಶೂದ್ರ, ಭೌದ್ಧ, ಜೈನ, ತಂತ್ರ, ಬುಡಕಟ್ಟು ಜಾನಪದ ಪರಂಪರೆಗಳು ಮತ್ತು ಸ್ವತಃ ಆಧುನಿಕತೆ ಎನ್ನುವ ಪರಂಪರೆಗಳೆಲ್ಲವೂ ಈ ವ್ಯವಸ್ಥೆಯಲ್ಲಿ ಪ್ರಮುಖವಾಗಿವೆ. ಈ ಒಂದೊಂದು ಪರಂಪರೆಯೂ ತನ್ನ ಹಿಂದಿನ ಮತ್ತು ಮತ್ತು ತನ್ನನ್ನು ಸುತ್ತುವರೆದಿರುವ ಪರಂಪರೆಗೆ ಸ್ಪಂದಿಸುತ್ತಾ ಅದನ್ನು ಪಲ್ಲಟಿಸುತ್ತಾ, ಉರುಳಿಸುತ್ತಾ ಮುಂದೆ ಸಾಗುತ್ತದೆ. ಎಂದರು.
ಡಾ. ಮಲ್ಲಿಕಾ ಘಂಟಿ ಭಾಷಣದ ಪೂರ್ಣಪಾಠ

Call us

Click Here

Leave a Reply