ಧನದಾಹಿತ್ವ ತೊರೆದು ಗುಣಗ್ರಾಹಿತ್ವ ಬೆಳೆಸಿಕೊಳ್ಳಬೇಕು: ಪ್ರಜ್ಞಾ ಪ್ರಭು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಆಧುನಿಕ ಜಗತ್ತಿನಲ್ಲಿ ಮಾನವನ ದಿನಚರಿಯು ಅನಾರೋಗ್ಯ ಸ್ವರೂಪವನ್ನು ಪಡೆಯುತ್ತಿದ್ದು ಇದನ್ನು ಬದಲಿಸಿಕೊಳ್ಳಬೇಕಾದ್ದು ತುಂಬಾ ಮುಖ್ಯ ಎಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಪ್ರಭು ಅಭಿಪ್ರಾಯಿಸಿದರು.

Call us

Click Here

೧೫ನೇ ಆಳ್ವಾಸ್ ನುಡಿಸಿರಿಯ ಪ್ರಯುಕ್ತ ನಡೆದ ವಿದ್ಯಾರ್ಥಿಸಿರಿಯಲ್ಲಿ `ದಿನಚರಿ: ಹಿಂದುಮುಂದು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು, ಹುಟ್ಟು, ಜೀವನ ಹಾಗೂ ಮರಣ ನಮ್ಮ ಬದುಕಿನ ದಿನಚರಿಯಾದರೆ ಇದಕ್ಕೆ ಪೂರಕವಾಗಿ ನಮ್ಮ ನಿತ್ಯ ಚಟುವಟಿಕೆಗಳು ನಡೆಯಬೇಕು. ಅದರೆ ಇಂದು ಮಾನವನು ಸಂಪತ್ತಿನ ಜೀವನದೆಡೆಗೆ ಮುಖಮಾಡಿ ನಿಂತಿದ್ದಾನೆ. ತನ್ನ ಸುತ್ತ ನಡೆಯುವಂತಹ ಯಾವುದೇ ಘಟನೆಗಳ ಬಗ್ಗೆ ಅರಿತುಕೊಳ್ಳದಾಗದಷ್ಟು ಮಾನವ ಬದಲಾಗಿದ್ದು, ಆತನ ನಿತ್ಯದ ಜೀವನ ಶೈಲಿಯು ಮಾರ್ಪಡಾಗುತ್ತಲೇ ಹೋಗುತ್ತಿದೆ ಎಂದರು.

ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ವಿಶ್ಲೇಷಿಸಿದ ಪ್ರಜ್ಞಾ ಪ್ರಭು, ಇಂದಿನ ಕೈಗಾರಿಕಾ ಕ್ರಾಂತಿ, ಯಾಂತ್ರೀಕೃತ ಬದುಕು ಮನುಷ್ಯ ಅನಾರೋಗ್ಯಕರ ಜೀವನ ವಿಧಾನವನ್ನು ಹೊಂದುವಂತೆ ಮಾಡುತ್ತಿವೆ ಎಂದು ತಿಳಿಸಿದರು. ಇಂತಹ ದಿನಚರಿಗಳು ಬದಲಾಗಬೇಕಿದ್ದು, ಓದು, ಬರಹ, ಸಾಹಿತ್ಯದೆಡೆಗೆ ಇಂದಿನ ಯುವಜನತೆ ಮುಖ ಮಾಡಬೇಕಿದೆ. ಜೀವನದ ಯಾನ ಅನ್ನುವಂತದ್ದು ಅರ್ಥಪೂರ್ಣವಾಗಿರಬೇಕೆಂದರೆ, ಬೇರೆಯವರು ನೆನಪಿಟ್ಟುಕೊಳ್ಳುಬೇಕಂತಿದ್ದರೆ ನಮ್ಮ ಚಟುವಟಿಕೆಗಳು ಬಹಳ ಪರಿಶುದ್ದವಾಗಿ, ಅಚ್ಚುಕಟ್ಟಾಗಿ ಇರಬೇಕಾದದ್ದು ಬಹಳ ಮುಖ್ಯವಾಗಿರುತ್ತದೆ. ನಮ್ಮ ದಿನಚರಿಯು ಪರಿಶುದ್ಧ ಹಾಗೂ ಅರ್ಥಗರ್ಭಿತವಾಗಿದ್ದಲ್ಲಿ ಮಾತ್ರ ಏಳಿಗೆ ಸಾಧ್ಯ ಎಂದು ತಿಳಿಸಿದರು. ವಿದ್ಯಾರ್ಥಿಸಿರಿಯ ಸಮ್ಮೇಳನಾಧ್ಯಕ್ಷೆ ಸನ್ನಿಧಿ ಟಿ.ರೈ ಪೆರ್ಲ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply