ಹಿರಿಯ ಪತ್ರಕರ್ತ, ಸಂಘಟಕ ಶೇಖರ ಅಜೆಕಾರು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪತ್ರಿಕೋದ್ಯಮ, ಸಂಘಟನೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡ ಕ್ರೀಯಾಶೀಲ ವ್ಯಕ್ತಿತ್ವದ ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅವರಿಗೆ ಈ ಭಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

Call us

Click Here

ಮುಂಬೈ ಯುನಿವರ್ನಿಟಿಯಲ್ಲಿ ಕನ್ನಡ ಎಂ.ಎನಲ್ಲಿ ಚಿನ್ನದ ಪದಕ ಪಡೆದುಕೊಂಡ ಅವರು ಕುಂದಾಪುರದಲ್ಲಿ ತಮ್ಮ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದರು. ಕುಂದಾಪುರ, ಮುಂಬೈ, ಬೆಂಗಳೂರು, ಮೂಡುಬಿದಿರೆಯಲ್ಲಿ ಕುಂದಪ್ರಭ, ಕರ್ನಾಟಕ ಮಲ್ಲ, ಕನ್ನಡಪ್ರಭ ಸೇರಿದಂತೆ ವಿವಿಧೆಡೆ ದಿನಪತ್ರಿಕೆ, ವೆಬ್ ಪೋರ್ಟೆಲ್‌ಗಳಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಅಜೆಕಾರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ.

ಸಂಘಟನಾತ್ಮವಾಗಿಯೂ ತೊಡಗಿಸಿಕೊಂಡಿದ್ದ ಅವರು ಮುಂಬಯಿ ಪೊವಾ ಕನ್ನಡ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿ ಹೊರನಾಡಿನಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ಸಕ್ರೀಯರಾಗಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿ ಗ್ರಾಮೋತ್ಸವ, ಮಿನಿ ಚಲನಚಿತ್ರೋತ್ಸವ, ಕವಿಗೋಷ್ಠಿ ಮುಂತಾದ ಸಮ್ಮೇಳನ, ಕಾರ್ಯಕ್ರಮಗಳ ಮೂಲಕ ನೂರಾರು ಸಾಧಕರು ಹಾಗೂ ಎಲೆಮರೆಯ ಕಾಯಿಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಹೆಗ್ಗಳಿಕೆ ಅವರದ್ದು. ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿಯ ಪ್ರಥಮ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಅಜೆಕಾರು ಅವರು ಈವರೆಗೆ ಕಂಬಳದ ಕುರಿತಾಗಿ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಮ್ಮೂರು ಅಜೆಕಾರು, ನಮ್ಮ ಕಟೀಲು, ಕೊಲ್ಲುರು ಡೈರಿ, ಮುಂಬಯಿ ಬೂಕ್, ಅತ್ತೂರು, ಹೆಬ್ಬೇರಿ ಮುಂತಾದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಅಖಿಲ ಭಾರತ ಅಗ್ನಿ ಶಿಖಾ ಮಂಚ್ ಪ್ರಶಸ್ತಿ, ಸ್ವಚೇತನ ಪ್ರಶಸ್ತಿ, ಕರುನಾಡ ಪದ್ಮಶ್ರೀ, ಕೊಪ್ಪಳ ಜಿಲ್ಲಾ ದಶಮಾನೋತ್ಸವ ಪ್ರಶಸ್ತಿ, ಡಾ. ಸಿದ್ಧಲಿಂಗಯ್ಯ ಪ್ರಶಸ್ತಿ, ಹೂಗಾರ ಮಾಧ್ಯಮ ಪ್ರಶಸ್ತಿ, ಅಖಿಲ ಭಾರತ ಪತ್ರಿಕಾ ಸಂಪಾದಕರ ಸಮಾವೇಶ ಗೌರವ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳು ಅವರಿಗೆ ಸಂದಿವೆ.

Click here

Click here

Click here

Click Here

Call us

Call us

Leave a Reply