ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರಾವಳಿ ವಾಯ್ಸ್ ಆಫ್ ಬೈಂದೂರು ಆಶ್ರಯದಲ್ಲಿ ದ್ವಿತೀಯ ಸುತ್ತಿನ ಆಡಿಷನ್ ಬೈಂದೂರು ಅಂಬಿಕಾ ಇಂಟರ್ ನ್ಯಾಷನಲ್‌ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಎಸ್. ರಾಜು ಪೂಜಾರಿ ಉದ್ಘಾಟಿಸಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ, ಶಿಸ್ತು ಬದ್ಧ ಜೀವನಗಳನ್ನು ರೂಡಿಸಿಕೊಳ್ಳಬೇಕು. ಸಂಗೀತಕ್ಕೆ ಅತಿಯಾದ ಶಕ್ತಿಯಿದ್ದು, ಉತ್ತಮ ಮಾನಸಿಕ ಆರೋಗ್ಯಕ್ಕೆ ಸಂಗೀತ ಹಾಡುವ ಅಥವಾ ಕೇಳುವ ಆಸಕ್ತಿಯಲ್ಲಿ ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದಯುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಬೈಂದೂರು ಬಿಜೆಪಿ ಮಹಿಳಾ ಮೋರ್ಚಾದಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾ.ಪಂ ಸದಸ್ಯ ನಾಗರಾಜ್ ಗಾಣಿಗ, ಶಿರೂರು ಉದ್ಯಮಿಗಳಾದ ರಘುರಾಮ್ ಮೇಸ್ತ, ಪ್ರಸಾದ ಪ್ರಭು ಶಿರೂರು, ವಿನೋದ್ ಮೇಸ್ತ ಶಿರೂರು, ಹೆಮ್ಮಾಡಿ ವಿವಿ ಮಂಡಳಿಯ ನಿರ್ದೇಶಕ ರಘುರಾಮ್ ಪೂಜಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ಕೃಷ್ಣ ಪೂಜಾರಿ, ದ್ವಿತೀಯ ಸುತ್ತಿನ ಆಡಿಷನ್‌ನ ತೀರ್ಮಾನಕಾಗಿ ಯದುರಾಜ್ ಮಲ್ಪೆ, ಉತ್ತಮ್ ಸಾರಂಗ ಕುಂದಾಪುರ, ಉಮಾಚಂದ್ರಕಾಂತ್ ಕಿಣಿ ಭಟ್ಕಳ್, ಕಾರ್ಯಕ್ರಮದ ಸಂಯೋಜಕ ಎಸ್. ಸುಶಾಂತ್ ಬೈಂದೂರು, ಗಿರೀಶ್ ಕೆ. ಪಡುವರಿ ಉಪಸ್ಥಿತರಿದ್ದರು.
ಎಚ್. ಉದಯ್ ಆಚಾರ್ ಪ್ರಾರ್ಥನೆ ಮಾಡಿದರು, ಕಾರ್ಯಕ್ರಮದ ಸಂಯೋಜಕ ಸ್ವಾತಿಕ ಮೇಸ್ತ ಸ್ವಾಗತಿಸಿದರು. ಜೆಸಿಐ ಬೈಂದೂರು ಸಿಟಿ ಸದಸ್ಯೆ ಚೈತ್ರಾ ಯಡ್ತರೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದ್ದರು.