ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕಿನ ಗಂಗಾನಾಡು ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಲಘು ಭೂಕಂಪದ ಅನುಭವವಾಗಿದ್ದು, ಕ್ಷಣಕಾಲ ಜನರು ಬೆಚ್ಚಿಬಿದ್ದ ಘಟನೆ ನಡೆದಿದೆ.
ಬೈಂದೂರಿನ ಗಂಗಾನಾಡು, ಅತ್ಯಾಡಿ, ಸಾರಂಕಿ, ಕುಳ್ಳಂಕಿ, ಗೋಳಿಬೇರು, ಮದ್ದೋಡಿ, ಕ್ಯಾರ್ತೂರು ಆಸುಪಾಸಿನಲ್ಲಿ ಸುಮಾರು ಮಧ್ಯಾಹ್ನ 2:30ರ ವೇಳೆಗೆ 10 ಸೆಕೆಂಡುಗಳ ಕಾಲ ಸಣ್ಣಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಲಘು ಕಂಪನವಾದರೂ ಮನೆಗಳಲ್ಲಿ ಜೋಡಿಸಿದ್ದ ಪಾತ್ರೆಗಳು ನೆಲಕ್ಕೆ ಬಿದ್ದಿದ್ದವು. ಗೋಳಿಬೇರಿನ ಮನೆಯೊಂದು ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಪಾತ್ರೆಗಳು ಅಲುಗಾಡಿ ನೆಲಕ್ಕೆ ಬಿದ್ದ ತಕ್ಷಣ ಗಾಬರಿಯಿಂದ ಮನೆಯಲ್ಲಿದ್ದವರು ಓಡಿ ಹೊರಕ್ಕೆ ಬಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.