ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದು ಮನುಷ್ಯನಲ್ಲಿ ಸ್ವಾರ್ಥ ಹೆಚ್ಚುತ್ತಿದೆ ಎಂದು ಒಮ್ಮೊಮ್ಮೆ ಭಾಸವಾಗುತ್ತದೆ. ಆದರೆ ನಾವು ಆಡುವ ಮಾತು ಹಾಗೂ ಮಾಡುವ ಕೆಲಸ ಎರಡೂ ಒಂದೇ ಆಗಿದ್ದರೇ ಪ್ರೀತಿ ವಿಶ್ವಾಸದ ಸಮಾಜ ನಿರ್ಮಾಣವಾಗುತ್ತದೆ. ಕಲಾ ಚಟುವಟಿಕೆಗಳು ಅದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ತಗ್ಗರ್ಸೆ ಬಾಬು ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಬೈಂದೂರಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಹಮ್ಮಿಕೊಂಡ ’ಸುರಭಿ ಜೈಸಿರಿ’ ಸಮಾರಂಭದ ಅಧ್ಯಕ್ಷತೆ ವಹಿಸಿ ಸಮಾರೋಪ ನುಡಿಗಳನ್ನಾಡಿದರು.
ಹಿರಿಯ ಯಕ್ಷಗಾನ ಕಲಾವಿದ ಹೇರಂಜಾಲು ಸುಬ್ಬಣ್ಣ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಗುರುಗಳಾದ ಪ್ರಶಾಂತ ಮಯ್ಯ ದಾರಿಮಕ್ಕಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಸುರಭಿಯ ಚಂಡೆ ವಿಭಾಗದ ಕಲಾವಿದರಾದ ಶಾಂತಾ, ಭಾಗೀರತಿ ಹಾಗೂ ಲಲಿತಾ ಮರಾಠಿ ಅವರನ್ನು ಗೌರವಿಸಲಾಯಿತು.
ಬೈಂದೂರು ರೋಟರಿ ಅಧ್ಯಕ್ಷ ಐ. ನಾರಾಯಣ, ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚನ್ನಕೇಶವ ಉಪಾಧ್ಯಾಯ, ಬೈಂದೂರು ಜೇಸಿರೆಟ್ ಅಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್, ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಯಡ್ತರೆ, ಉಪ್ಪುಂದ ಜೆಸಿಐ ಅಧ್ಯಕ್ಷ ಪುರಂದರ ಖಾರ್ವಿ ಅತಿಥಿಗಳಾಗಿದ್ದರು. ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ, ಉಪಾಧ್ಯಕ್ಷ ಆನಂದ ಮದ್ದೋಡಿ, ಕಾರ್ಯದರ್ಶಿ ರಾಮಕೃಷ್ಣ ಉಪ್ಪುಂದ, ನಿಟಕಪೂರ್ವಾಧ್ಯಕ್ಷ ಶಿವರಾಮ ಕೊಠಾರಿ ಉಪಸ್ಥಿತರಿದ್ದರು.
ಸುರಭಿ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ಭಾಡ ಸನ್ಮಾನಿತರ ಪರಿಚಯ, ನಿರ್ದೇಶಕ ಸುಧಾಕರ ಪಿ. ಬೈಂದೂರು ಗೌರವ ಸ್ವೀಕರಿಸಿದರ ಪಟ್ಟಿ ವಾಚಿಸಿದರು. ಜೊತೆ ಕಾರ್ಯದರ್ಶಿ ಅಬ್ದುಲ್ ರವೂಫ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ವೈ. ಕೊರಗ ಧನ್ಯವಾದಗೈದರು. ಜೊತೆ ಕಾರ್ಯದರ್ಶಿ ರಾಘವೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ವಾಸುದೇವ ಪಡುವರಿ ಸಹಕರಿಸಿದರು.
Also read
► ‘ಬಿಂದುಶ್ರೀ’ ನನ್ನ ಜೀವಮಾನದ ಶ್ರೇಷ್ಠ ಪುರಸ್ಕಾರ: ನಟ ರಮೇಶ್ ಭಟ್ – https://kundapraa.com/?p=30935 .
► ಸಂಗೀತ ಕಲಾವಿದೆ ಗೌರಿ ತಗ್ಗರ್ಸೆಗೆ ಸನ್ಮಾನ – https://kundapraa.com/?p=30917 .
► ಸಮಾಜದ ಸ್ವಸ್ಥ್ಯಕ್ಕೆ ಕಲೆಯ ಆಸ್ವಾದನೆ ಆಗತ್ಯ: ಎಸ್. ಪ್ರಕಾಶ್ಚಂದ್ರ ಶೆಟ್ಟಿ – https://kundapraa.com/?p=30911 .
► ಪ್ರಸಿದ್ಧ ನಟ ರಮೇಶ್ ಭಟ್‌ಗೆ ಬಿಂದಶ್ರೀ ಪ್ರಶಸ್ತಿ – https://kundapraa.com/?p=30908 .
► ಸುರಭಿ ಜೈಸಿರಿ ಆಮಂತ್ರಣ ಪತ್ರಿಕೆ ಬಿಡುಗಡೆ – https://kundapraa.com/?p=30847 .
► ಜ.23ರಿಂದ ಸುರಭಿ ಜೈಸಿರಿ – ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ – https://kundapraa.com/?p=30841 .