ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಿನ್ನೆ ರಾತ್ರಿ ಕೋಟದಲ್ಲಿ ನಡೆದಿರುವ ಸ್ನೇಹಿತರಿಬ್ಬರ ಕೊಲೆಗೆ ಇಡೀ ಕೋಟ ಪರಿಸರ ಮೊಮ್ಮಲ ಮರುಗಿದೆ. ಮರಣೋತ್ತರ ಪರೀಕ್ಷೆ ನಂತರ ಶವ ವಾರೀಸುದಾರರಿಗೆ ಬಿಟ್ಟುಕೊಟ್ಟಿದ್ದು, ಸಂಬಂಧಿಕರು ಸಾರ್ವಜನಿಕರು ಅರ್ಧಗಂಟೆಗೂ ಮಿಕ್ಕ ಶವ ರಸ್ತೆಯಲ್ಲಿ ಇಟ್ಟು ಪ್ರತಿಭಟಿಸಿ, ರಸ್ತೆ ತಡೆ ನಡೆಸಿದರು. ಸಂಬಂಧಿಕರ ಪೋಷಕರ ಕಣ್ಣಿರು ಕಲ್ಲುಮನಸ್ಸನ್ನೂ ಕರಗಿಸುವಂತೆ ಇತ್ತು. ಆರೋಪಿಗಳ ಶೀಘ್ರ ಬಂದಿಸುವಂತೆ ಒತ್ತಾಯಿಸಿದ ಪ್ರತಿಭಟನಾನಿರತರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನುಕ ಕ್ರಮ ಕೈಗೊಂಡು ಶಿಕ್ಷೆ ವಿಧಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಹೆದ್ದಾರಿ ತೆರವು ಮಾಡಿದ ಪ್ರತಿಭಟನಾಕಾರರು ಶ್ರೀ ಅಮೃತೇಶ್ವರಿ ದೇವಸ್ಥಾನ ಬಳಿ ವೃತ್ತದಲ್ಲಿ ಮತ್ತೆ ಶವವಿಟ್ಟು ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಎಸ್ಪಿ ಬರುವಂತೆ ಆಗ್ರಹಿಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರ್ಗಿ ಭೇಟಿ ನೀಡಿ, ಪ್ರತಿಭಟನೆ ನಡೆಸುವವರ ಮನ ಒಲಿಸಿದ ನಂತರ ರಸ್ತೆ ಬಂದ್ ತೆರವು ಮಾಡಲಾಯಿತು. ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯಿತು.
Also read: ► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959
► ಸಾವಿನಲ್ಲೂ ಒಂದಾದ ಆಪ್ತ ಸ್ನೇಹಿತರು. ಮರುಗಿದ ಕೋಟ ಜನತೆ – https://kundapraa.com/?p=30979 .