ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಭರತ್ ಹಾಗೂ ಯತೀಶ್ ಕಾಂಚನ್ ಆಪ್ತ ಸ್ನೇಹಿತರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಇಬ್ಬರೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಭರತ್ ಕಳೆದ ಎರಡು ವರ್ಷದಿಂದ ಆಟೋರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದರೆ, ಯತೀಶ್ ಕಳೆದ ಬಾರಿ ಕುಂದಾಪುರದಿಂದ ವಿಧಾನ ಸಭೆಗೆ ಸ್ಪರ್ಧಿಸಿದ ರಾಜೇಶ್ ಮಲ್ಲಿ ಸಹಾಕಯರಾಗಿ ಕೆಲಸ ಮಾಡುತ್ತಿದ್ದು, ಚುನಾವಣೆ ನಂತರ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಬ್ಯಾಂಕ್ ಒಂದರ ಉದ್ಯೋಗಿ ಆಗಿದ್ದರು ಎನ್ನಲಾಗಿದೆ.
ಯತೀಶ್‌ಗೆ ತಂದೆ ತಾಯಿಯಿಲ್ಲದೆ ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದು, ಬಿಕಾಂ ಪದವೀಧರ. ಭರತ್ ಬಿಬಿಎಂ ಪದವಿಧರಾಗಿದ್ದು, ತಂದೆ ರಾಮಣ್ದ ತಾಯಿ ಪಾರ್ವತಿ ಕೂಲಿ ಕಾರ್ಮಿಕರು. ಭರತ್ ಸ್ಥಳೀಯ ಸಂಘದ ಅಧ್ಯಕ್ಷರಾಗಿದ್ದು, ಓರ್ವ ತಮ್ಮ ೭ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಯತೀಶ್ ಇನ್ನೆರೆಡು ದಿನದಲ್ಲಿ ಬೆಂಗಳೂರಿಗೆ ಮರಳುವವರಿದ್ದರು. ಲೋಹಿತ್ ಪೂಜಾರಿ ಪೋನ್ ಮಾಡಿ ಕರೆಯದಿದ್ದರೆ ಸ್ಥಳಕ್ಕೆ ಬರುತ್ತಿರಲಿಲ್ಲ. ಯಾರಿಗೋ ಹಾಕಿದ ಸ್ಕೆಚ್ ಇಬ್ಬರು ಪ್ರಾಣ ಸ್ನೇಹಿತರು ಪ್ರಾಣಕ್ಕೆ ಎರವಾಗಿದ್ದು ಮಾತ್ರ ವಿಪರ್ಯಾಸ.
ಮರಣೋತ್ತರ ಪರೀಕ್ಷೆ ನಂತರ ಶವ ವಾರೀಸುದಾರರಿಗೆ ಬಿಟ್ಟುಕೊಟ್ಟಿದ್ದು, ಸಂಬಂಧಿಕರು ಸಾರ್ವಜನಿಕರು ಅರ್ಧಗಂಟೆಗೂ ಮಿಕ್ಕ ಶವ ರಸ್ತೆಯಲ್ಲಿ ಇಟ್ಟು ಪ್ರತಿಭಟಿಸಿ, ರಸ್ತೆ ತಡೆ ನಡೆಸಿದರು. ಸಂಬಂಧಿಕರ ಪೋಷಕರ ಕಣ್ಣಿರು ಕಲ್ಲುಮನಸ್ಸನ್ನೂ ಕರಗಿಸುವಂತೆ ಇತ್ತು. ಆರೋಪಿಗಳ ಶೀಘ್ರ ಬಂದಿಸುವಂತೆ ಒತ್ತಾಯಿಸಿದ ಪ್ರತಿಭಟನಾನಿರತರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನುಕ ಕ್ರಮ ಕೈಗೊಂಡು ಶಿಕ್ಷೆ ವಿಧಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಹೆದ್ದಾರಿ ತೆರವು ಮಾಡಿದ ಪ್ರತಿಭಟನಾಕಾರರು ಶ್ರೀ ಅಮೃತೇಶ್ವರಿ ದೇವಸ್ಥಾನ ಬಳಿ ವೃತ್ತದಲ್ಲಿ ಮತ್ತೆ ಶವವಿಟ್ಟು ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಎಸ್ಪಿ ಬರುವಂತೆ ಆಗ್ರಹಿಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರ್ಗಿ ಭೇಟಿ ನೀಡಿ, ಪ್ರತಿಭಟನೆ ನಡೆಸುವವರ ಮನ ಒಲಿಸಿದ ನಂತರ ರಸ್ತೆ ಬಂದ್ ತೆರವು ಮಾಡಲಾಯಿತು. ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯಿತು.
Also read:
► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959 .
► ಕೋಟದಲ್ಲಿ ಸ್ನೇಹಿತರಿಬ್ಬರ ಕೊಲೆ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ – https://kundapraa.com/?p=30976 .