ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ.ಕ.ಜಿಲ್ಲೆಯಿಂದ ಪ್ರತಿಸಿಧಿಸಿದ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿ, ಶಿಕ್ಷಕ ನಾಗರಾಜ ಖಾರ್ವಿ 4×100 ಮೀ. ಫ್ರೀ ಸ್ಟೈಲ್ ಸ್ವಿಮ್ಮಿಂಗ್ ರಿಲೇಯಲ್ಲಿ ಚಿನ್ನವನ್ನೂ, 4×100 ಮೀ ಮೆಡ್ಲೇ ಸ್ವಿಮ್ಮಿಂಗ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತೇನೆ.