ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸೇರಿದಂತೆ ಡಿಎಆರ್ನ ಇಬ್ಬರು ಪೊಲೀಸ್ ಪೇದೆಗಳನ್ನ ಬಂಧಿಸಲಾಗಿದೆ. ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಪೇದೆಗಳಾದ ಪವನ್ ಅಮೀನ್, ವೀರೇಂದ್ರ ಆಚಾರ್ಯ ಬಂಧಿತರು.
ಕಳೆದ ತಿಂಗಳ ಜನವರಿ 27 ರಂದು ಕೋಟದಲ್ಲಿ ಭರತ್ ಹಾಗೂ ಯತೀಶ್ ಎಂಬುವವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಆರೋಪಿಗಳ ಜೊತೆ ಪೇದೆಗಳು ನಿಕಟ ಸಂಪರ್ಕ ಹೊಂದಿದ್ದರು ಹಾಗೂ ಹೆಬ್ರಿಯ ಕುಚ್ಚೂರಿನಲ್ಲಿರುವ ಪವನ್ ಅಮೀನ್ ಮನೆಯಲ್ಲೇ ಆರೋಪಿಗಳು ತಂಗಿದ್ದರು. ಇನ್ನು ಆರೋಪಿಗಳಿಗೆ ಮೊಬೈಲ್ ಹಾಗೂ ಹೊಸ ಸಿಮ್ ಕಾರ್ಡ್ ಕೊಡಿಸಿದ್ದೂ ಅಲ್ಲದೇ ಕಾನ್ಸ್ಟೇಬಲ್ ವೀರೇಂದ್ರ ಜೊತೆ ಸೇರಿ ಕಾರಿನ ವ್ಯವಸ್ಥೆಯನ್ನು ಪವನ್ ಮಾಡಿಕೊಟ್ಟು, ಆಗುಂಬೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಕುಮ್ಮಕ್ಕಿನಂತೆ ಕೊಲೆ ನಡೆದಿತ್ತು.
ಇದನ್ನೂ ಓದಿ:
► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959 .
► ಕೋಟದಲ್ಲಿ ಸ್ನೇಹಿತರಿಬ್ಬರ ಕೊಲೆ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ – https://kundapraa.com/?p=30976 .
► ಸಾವಿನಲ್ಲೂ ಒಂದಾದ ಆಪ್ತ ಸ್ನೇಹಿತರು. ಮರುಗಿದ ಕೋಟ ಜನತೆ – https://kundapraa.com/?p=30979 .
► ಕೋಟ ಯುವಕರ ಹತ್ಯೆ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ – https://kundapraa.com/?p=31009 .
► ಕೋಟ ಅವಳಿ ಕೊಲೆ ಪ್ರಕರಣ: ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ 6 ಮಂದಿ ಬಂಧನ – https://kundapraa.com/?p=31071 .