ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪರಸ್ಪರ ಪ್ರೀತಿಸುತ್ತಿದ್ದ ಕೋಟೇಶ್ವರ ಮಾರ್ಕೋಡು ರಾಮ ಪೂಜಾರಿ ಪುತ್ರ ಶ್ರೀಕಾಂತ ಪೂಜಾರಿ ಹಾಗೂ ಗಂಗೊಳ್ಳಿ ನರಸಿಂಹ ಖಾರ್ವಿ ಪುತ್ರಿ ಶಾಲಿನಿ ಖಾರ್ವಿ ವಿವಾಹ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಮಂಗಳವಾರ ಪೋಷಕಲರ ಸಮ್ಮುಖದಲ್ಲಿ ಮದುವೆ ನಡೆಯಿತು.
ಹಲವು ಸಮಯಗಳಿಂದ ಪ್ರೀತಿಸುತ್ತಿದ್ದ ಜೋಡಿ ಮನೆಯವರ ವಿರೋಧದ ಹಿನ್ನೆಲೆ ಕುಂದಾಪುರ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರಾಧಾದಾಸ್ ಬಳಿ ವಿವಾಹ ಮಾಡಿಸುವಂತೆ ಮನವಿ ನೀಡಿದ್ದರು. ಅದರಂತೆಯೇ ರಾಧಾದಾಸ್ ಎರಡು ಮನೆಯವರ ಬಳಿ ಮಾತುಕತೆ ನಡೆಸಿ ಮದುವೆ ಮಾಡಿಸಿದ್ದಾರೆ.
ಯುವತಿ ತಂದೆ, ಸಹೋದರ ಹಾಗೂ ಬಂಧುಗಳು, ಯುವಕನ ತಾಯಿ ಹಾಗೂ ಬಂಧುಗಳು, ಮಾರ್ಕೋಡು ಸುಬ್ಬಣ್ಣ ಶೆಟ್ಟಿ, ಮಹಿಳಾ ಸಾಂತ್ವಾನ ಕೇಂದ್ರದ ಸಿಬ್ಬಂದಿಗಳು ಇದ್ದರು.










